ರಜತ್ ಲೋಕಸಭಾ ಟಿಕೆಟ್ ಗೆ ಮತ್ತೆ ಅಡ್ಡಗಾಲು ಹಾಕಿದರಾ ಶೆಟ್ಟರ್..?
ಹುಬ್ಬಲಿ : ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ರಜತ್ ಉಳ್ಳಾಗಡ್ಡಿಮಠ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಗೊಂಡು,ರಜತ್ ಕಾಂಗ್ರೆಸ್ ಟಿಕೆಟ್ ತಪ್ಪಿಸಿಕೊಂಡು ಮತ್ತೆ ಲೋಕಸಭಾ ಸ್ಪರ್ಧೆಗೆ ಸಂಘಟನೆ ಮಾಡುತ್ತಾ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಶುರು ಮಾಡಿದ್ದರು.
ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಸಂಘಟನೆ ಮಾಡಿದ್ದ ರಜತ್ ಉಳ್ಳಾಗಡ್ಡಿಮಠಗೆ ಮುಂದೊಂದು ದಿನ ಶೆಟ್ಟರ್ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಕಲ್ಪನೆ ಕೂಡ ಇರಲಿಲ್ಲ,ಆದರೆ ಬದಲಾದ ರಾಜಕೀಯ ಘಳಿಗೆಯಲ್ಲಿ ಶೆಟ್ಟರ್ ಕಾಂಗ್ರೆಸ್ ಗೆ ಬಂದು ಸೋಲು ಅನುಭವಿಸಿ ಇದೀಗ MLC ಆಗಿ ಅಧಿಕಾರ ಅನುಭವಿಸುತ್ತಿದ್ದಾರೆ.
ಇನ್ನು ಮತ್ತೊಂದು ಕಡೆ ಲೋಕಸಭಾ ಟಿಕೆಟ್ ಪಡೆಯುವ ಹಂತದಲ್ಲಿ ಇರುವ ರಜತ್ ಉಳ್ಳಾಗಡ್ಡಿಮಠ ಗೆ ಇದೀಗ ಶೆಟ್ಟರ್ ಅವರಿಂದ ಮತ್ತೊಮ್ಮೆ ಸಂಕಷ್ಟ ಎದುರಿಸುವಂತಾಗಿದೆ.ಶೆಟ್ಟರ್ ತಮ್ಮ ಆಪ್ತ ಬಿಜೆಪಿ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಸಹೋದರ ಹಾಲಿ ಬಿಜೆಪಿ MLC ಪ್ರದೀಪ್ ಶೆಟ್ಟರ್ ಅವರಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದು ಕಾಂಗ್ರೆಸ್ ಪಕ್ಷದ ವರಿಷ್ಠರಿಗೂ ಕೂಡ ಟೆನ್ಶನ್ ಆಗಿದೆ. ಅಲ್ಲದೆ ಮುಖ್ಯವಾಗಿ ಟಿಕೆಟ್ ಲಾಭಿಯಲ್ಲಿ ಮೊದಲ ಸ್ಥಾನದಲ್ಲಿರುವ ರಜತ್ ಉಳ್ಳಾಗಡ್ಡಿ ಮಠಗೆ ಸದ್ಯ ಇದೆ ವಿಷಯ ಸಂಕಷ್ಟ ತಂದೊಡ್ಡಿದೆ.
ಮೂಲಗಳ ಮಾಹಿತಿಯಂತೆ ಶೆಟ್ಟರ್ ಬೇಡಿಕೆಗೆ ಕಾಂಗ್ರೆಸ್ ನಾಯಕರು ಮನ್ನಣೆ ನೀಡಿಲ್ಲ ಎನ್ನಲಾಗಿದೆ,ಅಲ್ಲದೆ ಲೋಕಸಭೆ ಟಿಕೆಟ್ ವಿಚಾರದಲ್ಲಿ ಲಾಬಿಗೆ ಅವಕಾಶ ಇಲ್ಲಾ ಎಂದು ಸಂದೇಶ ನೀಡಿದ್ದಾರಾಂತೆ,ಈಗಾಗಲೇ ರಾಹುಲ್ ಗಾಂಧಿ ಹಾಗೂ ಸುರ್ಜೇವಾಲ ಒಂದು ನಿರ್ಣಯ ತೆಗೆದುಕೊಂಡಿದ್ದು ಶಿವಲೀಲಾ ಕುಲಕರ್ಣಿ ಅಥವಾ ರಜತ್ ಉಳ್ಳಾಗಡ್ಡಿಮಠಗೆ ಲೋಕಸಭೆ ಟಿಕೆಟ್ ಸಿಗುವುದು ಫೈನಲ್ ಎನ್ನಲಾಗಿದೆ.
ಇನ್ನು ಕಾರ್ಯಕರ್ತರ ಪ್ರಕಾರ ಈ ಹಿಂದೆ ರಜತ್ ಉಳ್ಳಾಗಡ್ಡಿಮಠ ರಾಜಕೀಯ ಭವಿಷ್ಯಕ್ಕೆ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆಯಿಂದ ಅನ್ಯಾಯ ಆಗಿದ್ದರೆ ಇದೀಗ ಮತ್ತೆ ಅದೇ ಶೆಟ್ಟರ್ ಅವರು ತಮ್ಮ ಪಟಾಲಂ ಕರೆದುಕೊಂಡು ಬರುವದರಿಂದ ರಜತ್ ಗೆ ಸಿಗುವ ಅವಕಾಶ ವಂಚಿತರಾಗಬಾರದು ಎಂದು ಮಾತನಾಡಿಕೊಳ್ಳಲು ಶುರುಮಾಡಿದ್ದು ಇದು ಕೋಲ್ಡ್ ವಾರ್ ಗೆ ನಾಂದಿ ಹಾಡಿದಂತಾಗಿದೆ.
ಉದಯ ವಾರ್ತೆ ಹುಬ್ಬಳ್ಳಿ