ಯಾಲಕ್ಕಿ ನಾಡಿನಲ್ಲಿರಜತ್ ಮಿಂಚಿನ ಸಂಚಾರ.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕಿಳಿದ ಯುವ ನಾಯಕ.

Share to all

ಯಾಲಕ್ಕಿ ನಾಡಿನಲ್ಲಿರಜತ್ ಮಿಂಚಿನ ಸಂಚಾರ.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕಿಳಿದ ಯುವ ನಾಯಕ.

ಹಾವೇರಿ -ಇನ್ನೇನು ಲೋಕಸಭಾ ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಇರುವಾಗಲೇ ಎಲ್ಲಾ ಪಕ್ಷದವರು ಭರ್ಜರಿಯಾದ ಸಿದ್ದತೆಗಳನ್ನು ಆರಂಭ ಮಾಡಿದ್ದು ಇದರ ನಡುವೆ ಧಾರವಾಡ ಜಿಲ್ಲೆಯಲ್ಲೂ ಕೂಡಾ ಚುನಾವಣೆಯ ಕಾರ್ಯ ಚಟುವಟಿಕೆಗಳು ಆರಂಭಗೊಂಡಿದ್ದು ಕೈ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಕೂಡಾ ಪಕ್ಷ ಸಂಘಟನೆಯೊಂದಿಗೆ ಅಲ್ಲಲ್ಲಿ ಸಭೆ ಮಾಡುತ್ತಾ ಚುನಾವಣೆಯ ಸಿದ್ದತೆಗಳನ್ನು ಆರಂಭ ಮಾಡಿದ್ದಾರೆ.

ಈ ಹಿಂದೆ ವಿಧಾನ ಸಭಾ ಚುನಾವಣೆಯಲ್ಲೂ ಕೂಡಾ ಅಧಿಕಾರ ಇರಲಿ ಇಲ್ಲದಿರಲಿ ಪಕ್ಷ ಸಂಘಟನೆಯನ್ನು ಮಾಡುತ್ತಾ ಹಗಲಿರುಳು ಸುತ್ತಾಡಿ ಕೊನೆಗೆ ತ್ಯಾಗಮಯಿಯಾಗಿ ಬೇರೆಯವರಿಗೆ ಅವಕಾಶವನ್ನು ನೀಡಿದ ರಜತ್ ಉಳ್ಳಾಗಡ್ಡಿಮಠ ಅವರು ಸಧ್ಯ ಲೋಕಸಭಾ ಚುನಾವಣೆಯ ಮೇಲೆ ಕಣ್ಣೀಟ್ಟಿದ್ದು ಹೀಗಾಗಿ ಕ್ಷೇತ್ರದ ತುಂಬೆಲ್ಲಾ ಸುತ್ತಾಡುತ್ತಿದ್ದಾರೆ.ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲೂ ಪಕ್ಷ ಟಿಕೆಟ್ ತಪ್ಪಿಸಿದೆ ಎಂದುಕೊಂಡು ಮುನಿಸಿಕೊಳ್ಳದ ಇವರು ಸಧ್ಯ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಮತ್ತೆ ಲೋಕಸಭಾ ಅಖಾಡಕ್ಕೆ ಇಳಿದಿದ್ದಾರೆ.

ಈಗಾಗಲೆ ಕಳೆದ ಆರೇಳು ತಿಂಗಳುಗಳಿಂದ ಸಿದ್ದತೆಯನ್ನು ಮಾಡುತ್ತಿರುವ ಇವರು ಸಧ್ಯ ಹಾವೇರಿ ಜಿಲ್ಲೆಯ ಹಲವೆಡೆ ಮಿಂಚಿನ ಸಂಚಾರವನ್ನು ಮಾಡಿದರು.ಪಕ್ಷ ಸಂಘಟನೆ ಸೇರಿದಂತೆ ಹಲವು ವಿಷಯಗಳ ಕುರಿತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಶಿಗ್ಗಾವಿಯಲ್ಲಿ ಸಭೆ ನಡೆಸಿದ ರಜತ್ ಉಳ್ಳಾಗಡ್ಡಿಮಠ ಅವರು ಸಂಘಟನೆ ಬಗ್ಗೆ ಚರ್ಚಿಸಿದರು.ಮೊದಲು ರೇವಣ ಸಿದ್ದೇಶ್ವರ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡ ರಜತ್ ಉಳ್ಳಾಗಡ್ಡಿಮಠ ಅವರು ಇದರೊಂದಿಗೆ ಹಾವೇರಿ ಜಿಲ್ಲೆಯಲ್ಲಿ ಪ್ರವಾಸವನ್ನು ಮುಂದುವಸಿದಿದ್ದಾರೆ.

ಒಂದು ಕಡೆಗೆ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಇನ್ನ
ಹಾವೇರಿ ಜಿಲ್ಲೆಯ ಬಂಕಾಪುರ ಪಟ್ಟಣದ ಅರಳೇಶ್ವರ ಮಠಕ್ಕೆ ಭೇಟಿ ನೀಡಿದ ಇವರು ರೇವಣ್ಣ ಸಿದ್ದೇಶ್ವರ ಸ್ವಾಮೀಜಿಯವರ ಆಶೀರ್ವಾದ ಪಡೆದು ಪ್ರವಾಸವನ್ನು ಮುಂದುವರೆಸಿದರು.ಈ ವೇಳೆ ಮುಖಂಡರಾದ BC ಪಾಟೀಲ್,ಸುಲೇಮಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಿಗ್ಗಾವಿಯಲ್ಲೂ ಕೂಡಾ ಸಭೆ ನಡೆಸಿದ ರಜತ್ ಉಳ್ಳಾಗಡ್ಡಿಮಠ ಅವರು ಪಕ್ಷದ ಸಂಘಟನೆ ಸೇರಿದಂತೆ ಹಲವಾರು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿದರು.ಈ ಸಂದರ್ಭದಲ್ಲಿ ಯಾಸೀರ್‌ ಖಾನ್‌ ಪಠಾಣ್‌,ಬಿ ಸಿ ಪಾಟೀಲ್,ಚಂದ್ರು ಕೊಡ್ಲಿವಾಡ, ವಿಜಯ್ ಪಾಟೀಲ್, ಬಾಬರ್ ಬಾವೋಜಿ, ಗದಿಗೆಪ್ಪ, ಚನ್ನು ದೇಸಾಯಿ ಸೇರಿದಂತೆ ಅನೇಕರು ಹಾಜರಿದ್ದರು.ಇದರೊಂದಿಗೆ ಜಿಲ್ಲೆಯ ಹಲವು ಕಡೆಗಳಲ್ಲಿ ಮಿಂಚಿನ ಸಂಚಾರವನ್ನು ಮಾಡಿದ ಕೈ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರು ಪಕ್ಷದ ಸಂಘಟನೆ ಸೇರಿದಂತೆ ಲೋಕಸಭಾ ಚುನಾವಣೆಯ ತಾಲೀಮು ಆರಂಭ ಮಾಡಿದ್ದಾರೆ.

ಉದಯ ವಾರ್ತೆ ಹಾವೇರಿ


Share to all

You May Also Like

More From Author