ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಮುದಾಯ ಸಂಘಟಕರ ಮೊಂಡತನ.ವರ್ಗಾವಣೆ ಆದರೂ ಬಿಟ್ಟ ಹೋಗತಿಲ್ಲಾ ಪಾಲಿಕೆಯನ್ನ.

Share to all

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಮುದಾಯ ಸಂಘಟಕರ ಮೊಂಡತನ.ವರ್ಗಾವಣೆ ಆದರೂ ಬಿಟ್ಟ ಹೋಗತಿಲ್ಲಾ ಪಾಲಿಕೆಯನ್ನ.

ಹುಬ್ಬಳ್ಳಿ:-ಹೌದು ನಿನ್ನೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಮುದಾಯ ಸಂಘಟಕಾಧಿಕಾರಿಗಳ ದರ್ಭಾರ ಅಂತಾ ಉದಯ ವಾರ್ತೆ “ಬೇವೂರ ಭಿಕ್ಷಾಂಧೇಹಿ” ಅಂತಾ ವರದಿ ಮಾಡಿತ್ತು.ಅಲ್ಲದೇ ನಾಳೆ ಎಂ ಬಿ ಸಬರದ ಕಂದಾಯ ಅಧಿಕಾರಿ ಸುದ್ದಿ ಪ್ರಕಟಿಸಲಾಗುವುದು ಅಂತಾ ಹೇಳಿತ್ತು.

ಈಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಂದಾಯ ಅಧಿಕಾರಿಯಾಗಿರುವ M.B.ಸಬರದ ಅವರ ಸರದಿ.ಎಂ ಬಿ ಸಬರದ ಅವರೂ ಕೂಡಾ ಸಮುದಾಯ ಸಂಘಟನಾಧಿಕಾರಿ ಮತ್ತು “ಸಿ” ದರ್ಜೆ ಹೊಂದಿದವರು.ಇವರು ಯಾವ ದಿಕ್ಕಿನಿಂದ ಬಂದರೂ ಕಂದಾಯ ಅಧಿಕಾರಿ ಆಗಲು ಬರೋದಿಲ್ಲಾ.ಆದರೂ ಹಲವು ವರ್ಷಗಳಿಂದ ಹಸಿರು ಪೆನ್ನು ಹಿಡಿದು ದರ್ಭಾರ ನಡೆಸಿದ್ದಾರೆ.ಇವರೂ ಸಹ ಸರಕಾರ ಬಂದ ಕಡೆ ಕೊಡೆ ಹಿಡಿಯುವ ಜಾಯಮಾನದವರು ಮತ್ತು ಬಿಜೆಪಿ ಶಾಸಕರೊಬ್ಬರ ಸಂಭಂದಿ ಎಂದು ಹೇಳಿಕೊಂಡು ಲಕ್ಷ್ಮೀ ಬರುವ ಹುದ್ದೆಯಲ್ಲಿಯೇ ಹಲವು ವರ್ಷಗಳಿಂದ ಮುಂದುವರೆದಿದ್ದಾರೆ.

ಕಳೆದ 02-8-2023 ರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಸಬರದ ಅವರನ್ನು ಮಹಾನಗರ ಪಾಲಿಕೆಯಿಂದ ಬಿಡುಗಡೆಗೊಳಿಸಿ ಪೌರಾಡಳಿತ ಸೇವೆಗೆ ಹಿಂದುರಿಗಿಸಿದ್ದಾರೆ.ಅಲ್ಲದೇ ನಗರಾಭಿವೃದ್ಧಿ ಇಲಾಖೆಯ ಪೌರ ಸೇವಾ ಶಾಖೆಗೆ ಹಾಜರಾಗುವಂತೆ ಸೂಚಿಸಿ ಆದೇಶ ಮಾಡಿದ್ದಾರೆ.

ಆಯುಕ್ತರು ಆದೇಶ ಮಾಡಿದರೂ ಆಯುಕ್ತರ ಆದೇಶಕ್ಕೂ ಕ್ಯಾರೆ ಎನ್ನದ ಸಬರದ ಸಾಹೇಬರು ಕಂದಾಯ ಅಧಿಕಾರಿಯ ಹುದ್ದೆಯಲ್ಲಿ ಮುಂದುವರೆಯುತ್ತಿರುವುದು ಅವರ ಮೊಂಡತನ ಅಲ್ಲದೇ ಮತ್ತೇನು ಎನ್ನುವ ಪ್ರಶ್ನೆ ಸಾಮಾನ್ಯರಲ್ಲಿ ಕಾಡತಾ ಇದೆ.

ಇಂತಹ ಅಧಿಕಾರಿಗಳನ್ನ ತಕ್ಷಣ ಆಯುಕ್ತರು ಮೂಲ ಇಲಾಖೆಗೆ ಮರಳಿ ಕಳಿಸಬೇಕು.ಇಲ್ಲದೇ ಹೋದರೆ ಬೇವಿನ ಕಹಿ ಎಲ್ಲರನ್ನೂ ವಿಷ ಮಾಡಿ ಬಿಡುವುದರಲ್ಲಿ ಸಂದೇಹವೇ ಇಲ್ಲಾ.ಮಹಾನಗರ ಪಾಲಿಕೆಯಲ್ಲಿ ಅಕ್ರಮವಾಗಿ ಅಧಿಕಾರ ನಡೆಸುತ್ತಿರುವ ಸಮುದಾಯ ಸಂಘಟನಾಧಿಕಾರಿಗಳನ್ನು ಆಯುಕ್ತರು ರಿಲೀವ್ ಮಾಡಿ ಮೂಲ ಇಲಾಖೆಗೆ ಕಳಿಸಿ,ಪಾಲಿಕೆಯಲ್ಲಿರುವ ಅಧಿಕಾರಿಗಳಿಗೆ ಸ್ಥಾನ ಕೊಡಬೇಕೆಂಬುದು ಉದಯ ವಾರ್ತೆಯ ಕಳಕಳಿ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author