ಅದ್ಯಾರೋ ಮನೆಯಲ್ಲಿ ಉಂಡವನೇ ಜಾಣ ಅನ್ನೋ ತರಹ ಸಮುದಾಯ ಸಂಘಟಕರು.ಮಹಾನಗರ ಪಾಲಿಕೆಯಲ್ಲಿ ಅವರದೇ ದರ್ಭಾರ ನಡೆಸುತ್ತಿದ್ದಾರೆ.
ಹುಬ್ಬಳ್ಳಿ:-ಹೌದು ಕಳೆದ ಎರಡು ದಿನಗಳಿಂದ ಉದಯ ವಾರ್ತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಮುದಾಯ ಸಂಘಟಕರ ದರ್ಭಾರ ಅಂತಾ ವರದಿ ಪ್ರಸಾರ ಮಾಡುತ್ತಿದೆ.
ಮೊದಲ ದಿನ ಬೇವೂರ ಭಿಕ್ಷಾಂದೇಹಿ ಅಂತಾ ಸುದ್ದಿ ಪ್ರಸಾರ ಮಾಡಿತ್ತು.ನಂತರ ಎರಡನೇ ದಿನ ಪಾಲಿಕೆಯ ಆದೇಶ ದಿಕ್ಕರಿಸಿದ ಸಮುದಾಯ ಸಂಘಟನಾಧಿಕಾರಿ M.B.ಸಬರದ ಅಂತಾ ವರದಿ ಮಾಡಿತ್ತು.ಇದರ ಮದ್ಯೆ ಧರಿದ್ರ ಸರಕಾರ ಅಂತಾ ಸರಕಾರಿ ನೌಕರ ಶಂಕರ ಕುಡ್ಲಣ್ಣವರ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದ್ದನ್ನು ವರದಿ ಮಾಡಿತ್ತು.
ಇಂದು ಅದೇ ಮಹಾನಗರ ಪಾಲಿಕೆಯಲ್ಲಿ ಸಿ ದರ್ಜೆಯ ಸಮುದಾಯ ಸಂಘಟನಾಧಿಕಾರಿ ರಮೇಶ ನೂಲ್ವಿ ಅವರವ ಸರದಿ.ರಮೇಶ ನೂಲ್ವಿ ಸದ್ಯ ವಲಯ ಕಛೇರಿ 4 ರಲ್ಲಿ ವಲಯ ಆಯುಕ್ತರು ಅಂತಾ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇವರು ಸಿ ದರ್ಜೆಯ ನೌಕರನಾದರೂ ಅವನು ಆಡುವ ಮಾತು,ನಡೆ,ನುಡಿ ಸ್ಟೈಲ್ ಎಲ್ಲವೂ KAS ಆಪೀಸರ ತರಹ.ಅವನ ಕಛೇರಿಯಲ್ಲಿ ಅವನು ಕುಳಿತುಕೊಳ್ಳುವ ಟೇಬಲ್ ಮೇಲೆ ಭರ್ಜರಿಯಾಗಿ ಮಿಂಚುತ್ತಿರುವ ರಮೇಶ ನೂಲ್ವಿ Zonel comossener ಅಂತಾ ಇರುವ ಬೋರ್ಡೆ ಹೇಳುತ್ತದೆ. ಅವರು ಮಾಡುವ ನವರಂಗಿ ಆಟ ನೋಡಿದರೆ ಇವರೊಬ್ಬ KAS ಆಪೀಸರ ಇರಬೇಕು ಅಂದು ಕೊಳ್ಳುವುದಂತೂ ಸತ್ಯ ಆದರೆ ಇವರು ಕುಳಿತುಕೊಳ್ಳುವ ಕುರ್ಚಿ ಅಕ್ರಮ ಅನ್ನೋದು ಜನರಿಗೆ ಗೊತ್ತಿಲ್ಲಾ.
ಸಮುದಾಯ ಸಂಘಟನಾಧಿಕಾರಿಯಾಗಿರುವ ರಮೇಶ ನೂಲ್ವಿ ಅವರು ಆ ಕುರ್ಚಿಯಲ್ಲಿ ಕುಳಿತು ಇಂದಿಗೆ ಮೂರು ವರ್ಷ ಏಳು ತಿಂಗಳುಗಳೇ ಕಳೆದರೂ ಅವರನ್ನು ಆ ಜಾಗದಿಂದ ಕದಲಿಸಲು ಯಾರಿಗೂ ಆಗುತ್ತಿಲ್ಲಾ ಅಂದರೆ ಎಷ್ಟು ಪ್ರಭಾವಿಗಳು ಇದ್ದಾರೆ ಅನ್ನೋದು ಗೊತ್ತಾಗುತ್ತೇ.
ಮಹಾನಗರ ಪಾಲಿಕೆಯಲ್ಲಿ ಜೋನಲ್ 6 ಮತ್ತು 4 ಜೋಡೆತ್ತುಗಳು ಅಂತಾನೇ ಕರೆಯುತ್ತಾರೆ.ಆ ಎರಡು ಜೋಡೆತ್ತುಗಳನ್ನು ಆ ಕುರ್ಚಿಯಿಂದ ಖಾಲಿ ಮಾಡಿಸಲೇ ಬೇಕಾದವರು ಗಪ್ ಚುಪ್ ಯಾಕೆ ಗೊತ್ತಿಲ್ಲಾ.
ಮಹಾನಗರ ಪಾಲಿಕೆಯಲ್ಲಿ ಪ್ರಭಾರಿ ಹುದ್ದೆಯಲ್ಲಿದ್ದರೂ ಪ್ರಭಾರ ಅಂತಾ ಬೋರ್ಡಿನಲ್ಲಿ ಹಾಕಿಕೊಳ್ಳದೇ ಸರಕಾರದಿಂದ ಆದೇಶ ಮಾಡಿಸಿಕೊಂಡು ಬಂದವರ ತರಹ ಮಾಡುವ ಈ ಸಿ ದರ್ಜೆಯ ನೌಕರರಿಗೆ ಆಯುಕ್ತರು ಪಾಠ ಮಾಡಬೇಕಿದೆ.
ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುವ ಶಾಸಕರು,ಸಚಿವರು ಗೆದ್ದ ಎತ್ತಿನ ಬಾಲ ಹಿಡಿಯುವ ಸಮುದಾಯ ಸಂಘಟಕರನ್ನು ಅವರ ಮೂಲ ಹುದ್ದೆಗೆ ಕಳಿಸಿ ಜನರ ನಂಬಿಕೆ ಉಳಿಸಿಕೊಳ್ಳತಾರಾ ಕಾದು ನೋಡಬೇಕಾಗಿದೆ.
ಉದಯ ವಾರ್ತೆ ಹುಬ್ಬಳ್ಳಿ