ಮೋದಿ ಶೆಟ್ಟರ್ ಭೇಟಿಯಾದ್ರಾ.. ಒಂದೇ ದಿನ ಪ್ರಧಾನಿ ಮೋದಿ,ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಕಲಬುರಗಿಯಲ್ಲಿ

Share to all

ಮೋದಿ ಶೆಟ್ಟರ್ ಭೇಟಿಯಾದ್ರಾ..
ಒಂದೇ ದಿನ ಪ್ರಧಾನಿ ಮೋದಿ,ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಕಲಬುರಗಿಯಲ್ಲಿ
ಕೆಪಿಸಿಸಿ ಮಹತ್ವದ ಮೀಟಿಂಗ್ ನಲ್ಲಿ ಜಗದೀಶ್ ಶೆಟ್ಟರ್ ಸೇರಿ 25 ಜನ ಕೈ ನಾಯಕರಿಗೆ ಅಹ್ವಾನ
ಮೀಟಿಂಗ್ ಗೆ ಅಹ್ವಾನ ಇದ್ರು ಮೀಟಿಂಗ್ ಬಿಟ್ಟು ಕಲಬುರಗಿಗೆ ಹೋದ ಶೆಟ್ಟರ್
ಶೆಟ್ಟರ್ ಘರ ವಾಪ್ಸಿ ಪಕ್ಕಾನಾ.
ಲೋಕಸಭೆ ಚುನಾವಣೆಗೆ ಲಿಂಗಾಯತ ದಾಳ ಉರುಳಿಸಿದ ಮಾಜಿ ಸಿಎಮ್
ಏನಿದು ಮೋದಿ,ಘರವಾಪ್ಸಿ ಲಿಂಗಾಯತ ದಾಳ

ಹುಬ್ಬಳ್ಳಿ:-ಕಳೆದ ಕೆಲ ದಿನಗಳಿಂದ ಶೆಟ್ಟರ್ ವಾಪಸ್ ಬಿಜೆಪಿ ಸೇರ್ತಾರೆ ಅನ್ನೋ ಸುದ್ದಿ ರಾಜ್ಯಾದ್ಯಂತ ಹರಿದಾಡುತ್ತಿದೆ.ಆ ಹರಿದಾಡುತ್ತಿರುವ ಸುದ್ದಿಗೆ ಇಂಬು ಕೊಡುವಂತೆ ಇಂದು ಜಗದೀಶ ಶೆಟ್ಟರ ಕಲಬುರಗಿ ಗೆ ಹೋಗಿರುವುದು ಯಾಕೆ ಪ್ರಶ್ನೆ ಎದ್ದಿದೆ.
ಇದಕ್ಕಿಂತ‌ ಮುಖ್ಯ ವಿಷಯ ಏನಂದ್ರೆ ಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮೀಟಿ
ಪಾರ್ಲಿಮೆಂಟರಿ ಇಲೆಕ್ಷನ್ ಕರೆದಿದೆ.ಆದ್ರೆ ಮೀಟಿಂಗ್ ಬಿಟ್ಟು ಜಗದೀಶ್ ಶೆಟ್ಟರ್ ಕಲಬುರಗಿಗೆ ಹೋಗಿದ್ದಾರೆ.

 


ಎಸ್ ಇವತ್ತು ಕಾಂಗ್ರೆಸ್ ಲೋಕಸಭೆ ಚುನಾವಣೆ ಹಿನ್ನಲೆ ಬೆಂಗಳೂರಿನಲ್ಲಿ ಮಹತ್ವದ ಮೀಟಿಂಗ್ ಕರೆದಿದ್ದಾರೆ.ಅದು ಕೇವಲ 25 ಕೈ ನಾಯಕರಿಗೆ ಮೀಟಿಂಗ್ ಬಿಟ್ಟು ಜಗದೀಶ್ ಶೆಟ್ಟರ್ ಕಲಬುರಗಿ ಹೋಗಿದ್ದು ಯಾಕೆ ಅನ್ನೋದೆ ಯಕ್ಷ ಪ್ರಶ್ನೆ. ಸೋತವರಿಗೂ ಹುದ್ದೆ ಕೊಟ್ಟ ಕಾಂಗ್ರೆಸ್ ಕರೆದಿರೋ ಮೀಟಿಂಗ್ ಗಿಂತ ಜಗದೀಶ್ ಶೆಟ್ಟರ್ ಗೆ ಕಲಬುರಗಿ ಯಾಕೆ ಇಂಪಾರ್ಟೆಂಟ್ ಅನ್ನೋದು ಕೂತುಹಲಕ್ಕೆ ಎಡೆಮಾಡಿಕೊಟ್ಟಿದೆ..

ಇಂದು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಬಂದಿರುವುದು,ಹಾಗೇ ಇಂದೇ ಜಗದೀಶ.ಶೆಟ್ಟರ ಕಲಬುರಗಿಗೆ ಭೇಟಿ ನೀಡಿರೋದು ರಾಜಕೀಯ ಮೊಗಸಾಲೆಯಲ್ಲಿ ಸಾಕಷ್ಟು ಕೂತುಹಲಕ್ಕೆ ಕಾರಣವಾಗಿದೆ. ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ವಾಪಸ್ ಬಿಜೆಪಿ ಸೇರುವ ಪ್ಲ್ಯಾನ್ ಮಾಡ್ತೀದಾರಾ ಅನ್ನೋ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ‌.ಆದ್ರೆ ಶೆಟ್ಟರ್ ಆಪ್ತ ಮೂಲಗಳ ಪ್ರಕಾರ ಜಗದೀಶ್ ಶೆಟ್ಟರ್ ವಚನ ಸಾಹಿತ್ಯ ಕಾರ್ಯಕ್ರಮಕ್ಕೆ ಹೋಗಿದ್ದಾರೆ ಎನ್ನಲಾಗಿದೆ.

ಆದ್ರೆ ಪ್ರಧಾನಿ ಮೋದಿ ಬಂದ ದಿನವೇ ಜಗದೀಶ್ ಶೆಟ್ಟರ್ ಕಲಬುರಗಿ ಪ್ರವಾಸ ಸಾಕಷ್ಟು ಕೂತುಹಲಕ್ಕೆ ಕಾರಣವಾಗಿದೆ.
ಈ ಹಿಂದೆ ಬಿಜೆಪಿ ರಾಜ್ಯಾದ್ಯಕ್ಷರಾಗಿ ಬಿ ವಾಯ್ ವಿಜಯೇಂದ್ರ ಅಧಿಕಾರವಹಿಸುತ್ತಿದ್ದಂತೆ ಲಿಂಗಾಯತ ಮುಖಂಡರು ಸೇರಿಕೊಂಡು ವಿಜಯೇಂದ್ರ ಭೇಟಿಯಾಗಿ ಪ್ರದೀಪ ಶೆಟ್ಟರಗೆ ಧಾರವಾಡ ಲೋಕಸಭೆ ಟಿಕೆಟ್ ನೀಡಬೇಕು.ಇಲ್ಲಾ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪಗೆ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಇನ್ನು ಶೆಟ್ಟರ್ ಕೂಡಾ ಕೆಲ ಬಾರಿ ದೆಹಲಿ ಮಟ್ಟದಲ್ಲಿ ಬಿಜೆಪಿ ನಾಯಕರೊಂದಿಗೆ ಘರ ವಾಪ್ಸಿ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಇದಲ್ಲದೆ ಕಳೆದ ಕೆಲ ದಿನಗಳ ಹಿಂದೆ ಶೆಟ್ಟರ್ ಕೂಡಾ ಕೆಲ ಬಿಜೆಪಿ ನಾಯಕರು ನನ್ನ ವಾಪಸ್ ಬಿಜೆಪಿ ಕರೆತರೋ ಪ್ರಯತ್ನದಲ್ಲಿದ್ದಾರೆ ಎಂದಿದ್ರು.ಇದೆಲ್ಲ ನೋಡಿದ್ರೆ ಶೆಟ್ಟರ್ ಕೈ ಬಿಟ್ಟು ಮತ್ತೆ ಕಮಲ ಪಾಳಯಕ್ಕೆ ಬರ್ತಾರೆ ಅನ್ನೋ ಸುದ್ದಿಗೆ ಪುಷ್ಠಿ ನೀಡುತ್ತಿವೆ.

ಒಟ್ಟಿನಲ್ಲಿ ಈ ಹಿಂದೆ ವಿಧಾನಸಭೆಯಲ್ಲಿ ಜಗದೀಶ ಶೆಟ್ಟರಗೆ ಬಿಜೆಪಿ ಟಿಕೆಟ್ ತಪ್ಪಿದ್ದನ್ನ ಬಹಳ ಗಂಭಿರವಾಗಿ ಪರಿಗಣಿಸಿರುವ ಅವರು ಧಾರವಾಡ ಲೋಕಸಭೆಗೆ ಜೋಶಿ ಅವರ ಟಿಕೆಟ್ ತಪ್ಪಿಸಲು ಲಿಂಗಾಯತರ ದಾಳ ಉರುಳಿಸುತ್ತಿದ್ದಾರೆ. ಇದ್ಯಾವುದನ್ನು ಕಿವಿಗೂ ಹಾಕಿಕೊಳ್ಳದ ಸಂಸದ ಪ್ರಲ್ಹಾದ ಜೋಶಿ ಮಾತ್ರ ರಾಜ್ಯದಲ್ಲಿ ಅರ್ಧ ಲೋಕಸಭೆ ಟಿಕೆಟ್ ಕೊಡುವವನು ನಾನೇ‌ ನನ್ನ ಟಿಕೆಟ್ ಯಾರ ತಪ್ಪಸ್ತಾರೆ ನೋಡೋಣ ಎನ್ನುತ್ತಿದ್ದಾರೆ..

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author