ಬಂಡಾಯದ ನೆಲದಲ್ಲಿ ಬಿಜೆಪಿಯ ಬಂಡಾಯದ ಸುಳಿವು.ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡ ಮಾಜಿ ಸಚಿವ ಎಸ್ ಬಿ ಎಂ.
ಹುಬ್ಬಳ್ಳಿ:-ಹೌದು ಧಾರವಾಡ ಲೋಕಸಭೆ ವ್ಯಾಪ್ತಿಯ ನವಲಗುಂದದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಯೋಜಿಸಿರುವ ಕಬಡ್ಡಿ ಉತ್ಸವಕ್ಕೆ ನವಲಗುಂದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಗೈರಾಗುವ ಮೂಲಕ ಬಿಜೆಪಿಯೊಂದಿಗಿನ ಮುನಿಸು ಮುಂದುವರೆದಂತಾಗಿದೆ.
ಇಂದು ಹುಬ್ಬಳ್ಳಿಯಲ್ಲಿ ಸಚಿವ ಎಚ್.ಕೆ.ಪಾಟೀಲ ಮುನೇನಕೊಪ್ಪ ಕಾಂಗ್ರೆಸ್ ಗೆ ಬರಲಿ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಮುನೇನಕೊಪ್ಪ ಕಬಡ್ಡಿ ಉತ್ಸವಕ್ಕೆ ಗೈರಾಗಿರುವುದು ಅವರ ನಡೆ ಅನುಮಾನಕ್ಕೆ ಕಾರಣವಾಗಿದೆ.
ಈ ಹಿಂದೆ ಶಂಕರಪಾಟೀಲ ಮುನೇನಕೊಪ್ಪ ತಾವೇ ಸ್ವತಃ ಸುದ್ದಿಗೋಷ್ಠಿ ಕರೆದು ಜನೇವರಿಯಲ್ಲಿ ಜನರ ಮದ್ಯೆ ಬರುತ್ತೇನೆ ಎಂದವರು ಇನ್ನೂ ಜನರ ಮದ್ಯೆ ಬಾರದಿರುವುದರ ಹಿಂದಿನ ನಡೆ ಮಾತ್ರ ಇನ್ನೂ ಬಿಟ್ಟುಕೊಟ್ಟಿಲ್ಲಾ.ಅಂದರೆ ಎಲ್ಲೋ ಒಂದು ಕಡೆ ಇನ್ನೂ ಕಾಂಗ್ರೆಸ್ ಸೇರುವ ಮಾತುಕತೆ ಮುಂದುವರೆದಿದೆ ಎನ್ನಲಾಗುತ್ತಿದೆ.
ಉದಯ ವಾರ್ತೆ ಹುಬ್ಬಳ್ಳಿ