ಪವರ್ ಟಿವಿ ಛಾಯಾಗ್ರಾಹಕನ ಪಿಂಕಿ ಲವ್ ಸ್ಟೋರಿ. ಪಿಂಕಿಯ ಹುಟ್ಟು ಹಬ್ಬ ಆಚರಿಸಿದ ಮಹೇಶ.
ಹುಬ್ಬಳ್ಳಿ:-ಹುಬ್ಬಳ್ಳಿಯ ಪವರ್ ಟಿವಿಯ ಛಾಯಾಗ್ರಾಹಕ ಮಹೇಶ ಬೋಜಗಾರನಿಗೆ ಪಿಂಕಿ ಅಂದರೆ ಎಲ್ಲಿಲ್ಲದ ಪ್ರೀತಿ. ತನ್ನ ಹೊಟ್ಟೆಗೆ,ಬಟ್ಟೆಗೆ ಕೊರತೆ ಆದರೂ ಸರಿ ಪಿಂಕಿಯ ಆರೋಗ್ಯ ಊಟದ ಬಗ್ಗೆಯೇ ಚಿಂತೆ.
ಮುಂಜಾನೆ ಎದ್ದು ಪಿಂಕಿಯ ಜೊತೆ ಒಂದಿಷ್ಟು ಆಟವಾಡಿ ಆಪೀಸ ಕೆಲಸಕ್ಕೆ ಬಂದು ಒಂದು ಘಂಟೆ ಆಗಿರುವುದಿಲ್ಲಾ ಅವರ ವರದಿಗಾರನಿಗೆ ಸುರುವು ಇಟ್ಟುಕೊಳ್ಳತಾನೆ ಸರ್ ನಾನು ಮನೆಗೆ ಹೋಗಿಬರತೇನಿ ಅಂತಾ.ಈಗ ಬಂದೀ ತಡೀಪಾ ಅಂದರೂ ಕೇಳದ ಛಾಯಾಗ್ರಾಹಕ ಪಿಂಕಿ ನೋಡಲು ಹಾತೊರೆಯುತ್ತಾನೆ.ಹಂಗೂ ಇಂಗೂ ಮಾಡಿ ಪಿಂಕಿ ನೋಡಲು ಹೋಗಿಯೇ ಬಿಡತಾನೆ.
ಪಿಂಕಿಯ ಮೇಲೆ ಅಷ್ಟೊಂದು ಪ್ರೀತಿ ಇಟ್ಟಿರುವ ಮಹೇಶ ನಿನ್ನೆ ಮನುಷ್ಯರ ಜನ್ಮ ದಿನಾಚರಣೆ ಆಚರಿಸಿದ ರೀತಿಯಲ್ಲಿ ಕೇಕ್ ತಂದು ಮನೆಯ ಕುಟುಂಬದವರೊಂದಿಗೆ ಪಿಂಕಿಯ ಹುಟ್ಟು ಹಬ್ಬ ಆಚರಿಸಿ,ಪಿಂಕಿಗೆ ಕೇಕ್ ತಿನ್ನಿಸಿ ಶ್ವಾನ ಪ್ರೀತಿಯನ್ನು ಮೆರೆದಿದ್ದಾನೆ.ಸಾಕು ಪ್ರಾಣಿ ನಾಯಿಯ ಮೇಲೆ ಇಟ್ಟಿರುವ ಮಹೇಶನ ಪ್ರೀತಿಗೆ ಒಂದು ಹ್ಯಾಟ್ಸ್ ಅಪ್ ಹೇಳಲೇಬೇಕು.
ಉದಯ ವಾರ್ತೆ ಹುಬ್ಬಳ್ಳಿ