ಧಾರವಾಡ ಲೋಕಸಭಾ ಕ್ಷೇತ್ರದ ಫೈನಲ್ ಕಾಂಗ್ರೆಸ್ ಹುರಿಯಾಳುಗಳು ಯಾರು ಗೊತ್ತಾ?
ಹುಬ್ಬಳ್ಳಿ : ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಧಾರವಾಡ ಅಖಂಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಓರ್ವ ವ್ಯಕ್ತಿಯನ್ನು ಪರಿಗಣಿಸುವಂತೆ ಅಂತಿಮ ಮೂರು ಹೆಸರನ್ನು ಫೈನಲ್ ಮಾಡಿ ಕೇಂದ್ರದ ಹೈ ಕಮಾಂಡ್ ಗೆ ಕಳುಹಿಸಿ ಕೊಟ್ಟಿದೆ. ಈ ಕುರಿತು ಇನ್ ಸೈಡ್ ಮಾಹಿತಿ ಎಕ್ಸ್ಕ್ಲೂಸಿವ್ ಆಗಿ ಉದಯವಾರ್ತೆಗೆ ಲಭ್ಯವಾಗಿದ್ದು ಈ ಪಟ್ಟಿಯನ್ನು ನಾವು ಬಹಿರಂಗ ಮಾಡುತ್ತಿದ್ದೇವೆ
ಲೋಕಸಭಾ ವೀಕ್ಷಕಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ,ಕೆಪಿಸಿಸಿ ಕಾರ್ಯದ್ಯಕ್ಷರಾದ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಈಶ್ವರ ಖಂಡ್ರೆ ಹಾಗೂ ಸ್ಥಳೀಯ ಮುಖಂಡರ ಸೂಚನೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಸರ್ವೇ ತಂಡಗಳು ಅಳೆದು ಅಂತಿಮವಾಗಿ ಈ ಕೆಳಗಿನ ಅಭ್ಯರ್ಥಿಗಳು ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಈ ಕೆಳಗಿನ ಅಬ್ಯರ್ಥಿಗಿಳು ಅರ್ಹ ಉಮೇದು ದಾರರು ಎಂದು ಪಟ್ಟಿಯನ್ನು ಕೇಂದ್ರ ನಾಯಕರಿಗೆ ಕಳುಹಿಸಿ ಕೊಟ್ಟಿದ್ದಾರೆ.
ಕ್ಷೇತ್ರದ ವೀಕ್ಷಕರ ಮೊದಲ ಪಟ್ಟಿಯಲ್ಲಿ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ,ಮಾಜಿ ಮೇಯರ್ ಅನಿಲ್ ಕುಮಾರ್ ಪಾಟೀಲ್ ಹಾಗೂ ಸದಾನಂದ ಡಂಗನವರ ಇದ್ದಾರೆ, ಅದೇ ರೀತಿಯಾಗಿ ಸರ್ವೇ ತಂಡಗಳ ಮೂಲ ಮಾಹಿತಿಯಂತೆ ಮೊದಲನೆಯದಾಗಿ ರಜತ್ ಉಳ್ಳಾಗಡ್ಡಿ ಮಠ ಹಾಗೂ ಶ್ರೀಮತಿ ಶಿವಲೀಲಾ ವಿನಯ್ ಕುಲಕರ್ಣಿ ಇದ್ದಾರೆ ಎಂದು ತಿಳಿದು ಬಂದಿದೆ
ಇನ್ನು ಅಂತಿಮವಾಗಿ ಕಾರ್ಯದ್ಯಕ್ಷರು ಸೂಚನೆ ಮೇರೆಗೆ ರಜತ್ ಉಳ್ಳಾಗಡ್ಡಿಮಠ ಹೆಸರು ಏಕಮಾತ್ರವಾಗಿ ಹೈ ಕಮಾಂಡ್ ಗೆ ರವಾನೆ ಯಾಗಿದ್ದು ವಿಶೇಷವಾಗಿದೆ.
ಇನ್ನು ಒಟ್ಟಾರೆಯಾಗಿ ಮೂರು ವಿಭಾಗಗಳಲ್ಲಿ ಯುವ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಹೆಸರು ಮುಂಚೂಣಿಯಲ್ಲಿದ್ದು ಇದ್ದು ಬಹುತೇಕ ಕಾಂಗ್ರೆಸ್ ಟಿಕೆಟ್ ಇವರಿಗೆ ನೀಡಿದರೆ ಉತ್ತಮ ಎನ್ನುವ ಅಭಿಪ್ರಾಯ ಇದೀಗ ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿದೆ.
ಈ ನಿರ್ಧಾರವನ್ನು ಕೈಗೊಳ್ಳಲು ರಜತ್ ಉಳ್ಳಾಗಡ್ಡಿಮಠ ಅವರ ತಂದೆ ವಿಶ್ವ ಪ್ರಕಾಶ್ ಉಳ್ಳಾಗಡ್ಡಿಮಠ ಈ ಹಿಂದೆ ಹೊಂದಿದ್ದ ವರ್ಚಸ್ಸು. ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಜತ ಉಳ್ಳಾಗಡ್ಡಿಮಠ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಬಿಟ್ಟು ಕೊಟ್ಟು ಪಕ್ಷಕ್ಕಾಗಿ ಮಾಡಿದ ತ್ಯಾಗ,ಅಲ್ಲದೆ ವ್ಯಯಕ್ತಿಕವಾಗಿ ಮಾಡಿರುವ ಪಕ್ಷ ಸಂಘಟನೆ ಕಾರಣ ಎಂದು ಹೇಳಲಾಗುತ್ತಿದೆ.
ಸದ್ಯದ ಮಟ್ಟಿಗೆ ಕಳೆದ ದಿನ ಈ ರಿಪೋರ್ಟ್ ದೆಹಲಿ ಅಂಗಳ ತಲುಪಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಯಾವ ನಿರ್ಧಾರವನ್ನೂ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ