ರಜತ್ ಹೋರಾಟಕ್ಕೆ ಕೇಂದ್ರ ಸಚಿವರು ಮಣಿದರೇ..?ರೇಲ್ವೇ ಇಲಾಖೆಯ MTS ಕಾಲೋನಿಯ ಲೀಸ್ ಟೆಂಡರ್ ಪ್ರಕ್ರಿಯೆ ದಿಢೀರ್ ರದ್ದು ಆಗಿದ್ಯಾಕೆ..

Share to all

  1. ರಜತ್ ಹೋರಾಟಕ್ಕೆ ಕೇಂದ್ರ ಸಚಿವರು ಮಣಿದರೇ..?ರೇಲ್ವೇ ಇಲಾಖೆಯ MTS ಕಾಲೋನಿಯ ಲೀಸ್ ಟೆಂಡರ್ ಪ್ರಕ್ರಿಯೆ ದಿಢೀರ್ ರದ್ದು

    ಆಗಿದ್ಯಾಕೆ…?

     

     

ಹುಬ್ಬಳ್ಳಿ : ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಹಾಗೂ ಮುಖಂಡರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಂತೆ ರೈಲ್ವೆ ಇಲಾಖೆ MTS ಕಾಲೋನಿಯ 13 ಎಕರೆ ಭೂಮಿಯನ್ನು ಲೀಸ್ ಕೊಡುವ ಟೆಂಡರ್ ಪ್ರಕ್ರಿಯನ್ನು ರದ್ದು ಗೊಳಿಸಿರುವುದನ್ನ ಗಮನಿಸಿದರೆ ಮತ್ತೊಂದು ಬಾರಿ ಜಯ ಸಿಕ್ಕಂತೆ ಆಗಿದೆ. ಈ ಹಿಂದೆ ಹುಬ್ಬಳ್ಳಿ ಬೆಂಗಳೂರು ಟ್ರೈನ್ ರದ್ದುಗೊಳಿಸಿದ ಸಂದರ್ಭದಲ್ಲಿ ಅಭಿಯಾನ ನಡೆಸಿ ಮತ್ತೆ ಟ್ರೈನ್ ಶುರು ವಾಗುವಂತೆ ಒತ್ತಡ ಹೇರಿದರು.ಈಗ ಮತ್ತೊಮ್ಮೆ ಹುಬ್ಬಳ್ಳಿಯ ಬಹುಮೌಲ್ಯ ಆಸ್ತಿಯ ಉಳಿವಿಗಾಗಿ ಹೋರಾಟ ನಡೆಸಿ ಸೈ ಎನಿಸಿಕೊಂಡಿದ್ದಾರೆ .

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ ರಜತ್,ಬ್ಲಾಕ್ ಮಟ್ಟದಿಂದ ಎಐಸಿಸಿ ವರೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾಡಿರುವ ಹೋರಾಟಕ್ಕೆ ಸಂದ ಜಯ ಇದಾಗಿದೆ,ಹುಬ್ಬಳ್ಳಿಯ ಹೃದಯ ಭಾಗದಲ್ಲಿ ಇರುವ ಈ ಭೂಮಿಯನ್ನು ಲೀಸ್ ಕೊಡುವ ಉದ್ದೇಶವೇನು ಶಾಶ್ವತವಾಗಿ ರೈಲ್ವೆ ಇಲಾಖೆ ಕೈಬಿಟ್ಟಿದು ನಮ್ಮ ಹೋರಾಟದ ಫಲಿತಾಂಶ ಅಲ್ಲದೆ ಇಲ್ಲಿ ಪರ್ಯಾಯವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಆಗ್ರಹಿಸುತ್ತೆನೆ ಎಂದು ಹೇಳಿಕೆ ನೀಡಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author