ದರಿದ್ರ ಸರಕಾರ ಎಂದ ನೌಕರನಿಗೆ ನೋಟೀಸ್ ಕೊಟ್ಟು ಕೈ ತೊಳೆದುಕೊಂಡ ಪಾಲಿಕೆ.ದರಿದ್ರ ಸರಕಾರ ಎಂದವನ ಅಮಾನತ್ತಿಗೆ ಒತ್ತಡ ಹಾಕುತ್ತಿರುವ ಪಾಲಿಕೆ ಸದಸ್ಯರು.

Share to all

ದರಿದ್ರ ಸರಕಾರ ಎಂದ ನೌಕರನಿಗೆ ನೋಟೀಸ್ ಕೊಟ್ಟು ಕೈ ತೊಳೆದುಕೊಂಡ ಪಾಲಿಕೆ.ದರಿದ್ರ ಸರಕಾರ ಎಂದವನ ಅಮಾನತ್ತಿಗೆ ಒತ್ತಡ ಹಾಕುತ್ತಿರುವ ಪಾಲಿಕೆ ಸದಸ್ಯರು.

ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಪಾಲಿಕೆಯ ಸಾಮಾನ್ಯ ಆಡಳಿತ ವಿಭಾಗದ ಪ್ರ.ದ.ಸ.ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಂಕರ ಕುಡ್ಲಣ್ಣವರ ಅವರಿಗೆ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರು ಕಾರಣ ಕೇಳಿ ನೋಟೀಸ್ ಜಾರಿ ಮಾಡಿ ಒಂದು ವಾರವೇ ಕಳೆಯಿತು.ಇದು.ಆದರೆ ಸರಕಾರವನ್ನು ಧರಿದ್ರ ಸರಕಾರ ಎಂದ ಮಹಾನುಭಾವನನ್ನು ಪಾಲಿಕೆಯು ಈವರೆಗೂ ಅವನ ಮೇಲೆ ಕಾನೂನು ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸವೇ ಸರಿ.

ಉದಯ ವಾರ್ತೆ ಮಹಾನಗರ ಪಾಲಿಕೆಯಲ್ಲಿ ಪಾಲಿಕೆಯ ಸಾಮಾನ್ಯ ಆಡಳಿತ ವಿಭಾಗದ ಪ್ರ.ದ.ಸ.ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಂಕರ ಕುಡ್ಲಣ್ಣವರ ಸಾಮಾಜಿಕ ಜಾಲತಾಣದಲ್ಲಿ ಸರಕಾರದ ವಿರುದ್ಧ ಧರಿದ್ರ ಸರಕಾರ ಎಂದು ಸಂದೇಶ ಹರಿಬಿಟ್ಟು ಯಡವಟ್ಟು ಮಾಡಿಕೊಂಡ ಬಗ್ಗೆ ಉದಯ ವಾರ್ತೆ ಸುದ್ದಿ ಪ್ರಸಾರ ಮಾಡಿತ್ತು.ಸುದ್ದಿ ಪ್ರಸಾರವಾದ ಕೆಲವೇ ಘಂಟೆಗಳಲ್ಲಿ ಪಾಲಿಕೆ ನೋಟೀಸ್ ನೀಡಿ 24 ಘಂಟೆಯೊಳಗೆ ಕಾರಣ ಕೇಳಿ ನೋಟೀಸ್ ನೀಡಿತ್ತು.

ಏನಿದು ಪ್ರಕರಣ

ಸರಕಾರಿ ನೌಕರಿಯಲ್ಲಿದ್ದು ಸರಕಾರದ ವಿರುದ್ಧವಾಗಿ ಶಂಕರ ಕುಡ್ಲಣ್ಣವರ ಕಾಂಗ್ರೆಸ್ ಸರಕಾರ 22 ರಂದು ಮುಜರಾಯಿ ದೇವಸ್ಥಾನದಲ್ಲಿ ಪೂಜೆ ಮಾಡಲು ಆದೇಶ ನೀಡಿದೆ.ಹುಂಡಿಯಲ್ಲಿ ಬರುವ ಹಣ ಲೋಕಸಭೆ ಚುನಾವಣೆಗೆ ಬಳಸಿಕೊಳ್ಳೋ ಪ್ಲ್ಯಾನ್ ಮಾಡಿದೆ.ಹುಂಡಿಯಲ್ಲಿ ಹಾಕಿದ ಹಣ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳೋ ಪ್ಲ್ಯಾನ ಇದು.ನಮ್ಮ ಹಣವನ್ನು ಬೇರೇ ಸಮಾಜಕ್ಕೆ ಬಳಸಿಕೊಳ್ಳೋ ಧರಿದ್ರ ಸರಕಾರದ ತಂತ್ರಕ್ಕೆ ಬಲಿಯಾಗಬೇಡಿ.ಹಿಂದೂಗಳೇ ಎನ್ನುತ್ತಾ 22 ಕ್ಕೆ ದೇವಸ್ಥಾನಕ್ಕೆ ಹೋದರೂ ಹುಂಡಿಯಲ್ಲಿ ಹಣ ಹಾಕಬೇಡಿ.ಮನೆಯಲ್ಲಿ ಹುಂಡಿ ಇಟ್ಟು ಹಣ ಹಾಕಿ ತುಂಬಿದ ನಂತರ ಅನಾಥ ಮಕ್ಕಳಿಗೆ ಬಟ್ಟೆ ಊಟ ಕೊಡಿಸಿ,ಧರ್ಮ ರಕ್ಷಣೆ ಮಾಡಿ ರಾಜಕೀಯಕ್ಕೆ ಮರುಳಾಗಬೇಡಿ ಎಂದು ವಾಟ್ಸ್ ಅಪ್ ಸಂದೇಶ ಹಾಕಿದ್ದರು.

ಆ ವಾಟ್ಸ್ ಅಪ್ ಸಂದೇಶದ ಮೇಲೆ ಉದಯ ವಾರ್ತೆ ಬೆಳಕು ಚೆಲ್ಲಿ ವರದಿ ಪ್ರಸಾರ ಮಾಡಿತ್ತು.ವರದಿಗೆ ಸ್ಪಂದಿಸಿದ ಪಾಲಿಕೆ ಜಾವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಮಾನ್ಯ ಸರಕಾರದ ವಿರುದ್ದ ಯೋಜನೆಗಳ ಬಗ್ಗೆ ಬಹಳ ಕೀಳಾಗಿ ಸಂದೇಶವನ್ನು ರವಾನಿಸುವ ಮೂಲಕ ಪಾಲಿಕೆಯ ಘನತೆಗೆ ಧಕ್ಕೆ ಉಂಟಾಗಿದೆ ಪಾಲಿಕೆ ನೋಟೀಸ್ ನಲ್ಲಿ ತಿಳಿಸಿದೆ.

ಅಲ್ಲದೇ ಕರ್ನಾಟಕ ನಾಗರಿಕ ಸೇವಾ ನಿಯಮಗಳ 2021 ರ ನಿಯಮಾವಳಿ ಅರಿತುಕೊಳ್ಳದೆ ಬೇಜಾವಾಬ್ದಾರಿತನ ಹಾಗೂ ನಿರ್ಲಕ್ಷ್ಯ ತೋರಿರುವುದು ಗಂಭೀರವಾಗಿ ಪರಿಹಣಿಸಲಾಗಿರುತ್ತದೆ ಎಂದು ಪಾಲಿಕೆ ನೋಟೀಸ್ ನೀಡಿತ್ತು.ಈಗ ಪಾಲಿಕೆಯ ಕೆಲವು ಸದಸ್ಯರು ಕೂಡಲೇ ಅವರನ್ನು ಅಮಾನತ್ತು ಮಾಡುವಂತೆ ಆಯುಕ್ತರ ಮೇಲೆ ಒತ್ತಡ ಹಾಕಲಾರಂಭಿಸಿದ್ದಾರೆ ಎನ್ನಲಾಗಿದೆ.ಈಗಲಾದರೂ ಆಯುಕ್ತರು ಧರಿದ್ರ ಸರಕಾರ ಎಂದವನನ್ನು ಮನೆಗೆ ಕಳಿಸತಾರಾ ಕಾದು ನೋಡ ಬೇಕಾಗಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author