ಶಿಕ್ಷಕಿಯನ್ನು ಕೊಲೆ ಮಾಡಿ ಹೂತು ಹಾಕಿದ್ದ ಪ್ರಕರಣ ಆರೋಪಿ ಆರೆಸ್ಟ್.ಕೊಲೆ ಮಾಡಿ ಡ್ರಾಮಾ ಮಾಡಿದ್ದ ಆರೋಪಿ.
ಮಂಡ್ಯ:- ಶಾಲೆಗೆ ಹೋಗಿ ವಾಪಾಸ್ಸ ಬರುವಾಗ ಶಿಕ್ಷಕಿಯನ್ನು ಕೊಲೆ ಮಾಡಿ ಮಣ್ಣಲ್ಲಿ ಹೂತು ಹಾಕಿದ್ದ ಆರೋಪಿಯನ್ನು ಮಂಡ್ಯ ಜಿಲ್ಲೆಯ ಮೇಲುಕೋಟೆ ಪೋಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಕಿ ದೀಪಿಕಾಳನ್ನು ಹತ್ಯೆಗೈಯಲಾಗಿತ್ತು.ಪ್ರಕರಣಕ್ಕೆ ಸಂಬಂದಿಸಿದಂತೆ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ನಿತೀಶ ಎಂದು ಗುರುತಿಸಲಾಗಿದೆ.ಆರೋಪಿ ನಿತೀಶ ಶಿಕ್ಷಕಿ ಶಾಲೆಯಿಂದ ಬರುವುದನ್ನೇ ಕಾದು ಕುಳಿತು ಅವಳನ್ನು ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಅಡ್ಡಗಟ್ಟಿ ಎಳೆದೊಯ್ದು ಹತ್ಯೆಗೈದು ಶವವನ್ನು ಎಳೆದೊಯ್ದು ಮಣ್ಣಿನಲ್ಲಿ ಹೂತು ಹಾಕಿ ಹೋಗಿದ್ದ.
ಮಹಿಳೆಯೊಬ್ಬಳನ್ನು ಎಳೆದಾಡುವ ದ್ರಶ್ಯವನ್ನು ಬೆಟ್ಟದ ಮೇಲಿಂದ ಪ್ರವಾಸಿಗರೊಬ್ಬರು ಮೋಬೈಲನಲ್ಲಿ ಸೆರೆ ಹಿಡಿದಿದ್ದರು.ಸೆರೆ ಹಿಡಿದಿದ್ದ ದ್ರಶ್ಯದ ತುಣುಕುಗಳು ದೀಪಾಕಾ ಪತಿಯ ಕೈಗೆ ಸಿಕ್ಕಿದ್ದವು ಅದೇ ವಿಡಿಯೋವನ್ನು ಪೋಲೀಸರಿಗೆ ನೀಡಿದ್ದರು.ಆ ವಿಡಿಯೊ ನೋಡಿ ಆರೋಪಿಯನ್ನು ಬಂಧಿಸಿದ್ದಾರೆ.