ಬಿಜೆಪಿ ಸೇರಿದ ಜಗದೀಶ್ ಶೆಟ್ಟರಗೆ ಬಿಗ್ ಶಾಕ್.ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾದ ಪರಿಷತ್ ಸಭಾಪತಿ.
ಬೆಂಗಳೂರು:-ಮಾಜಿ ಸಿಎಂ ಜಗದೀಶ ಶೆಟ್ಟರ ಅವರು ನಿನ್ನೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.ನಿನ್ನೆ ಮದ್ಯಾಹ್ನ ಬಿಜೆಪಿ ಕೇಂದ್ರ ಕಛೇರಿಗೆ ಆಗಮಿಸಿದ್ದ ಶೆಟ್ಟರ ಅವರನ್ನು ಮಾಜಿ ಸಿಎಂ ಯಡಿಯೂರಪ್ಪ.ಬಿಜೆಪಿ ರಾಜ್ಯಾದ್ಯಕ್ಷ ಬಿ ವಾಯ್ ವಿಜಯೇಂದ್ರ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿತ್ತು.
ಈಗ ಜಗದೀಶ್ ಶೆಟ್ಟರಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ ಅಂತಾ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ವಿಧಾನ ಪರಿಷತ್ ಸ್ಥಾನಕ್ಕೆ ಜಗದೀಶ್ ಶೆಟ್ಟರ ರಾಜೀನಾಮೆ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ನನಗೆ 11.45 ಕ್ಕೆ ಜಗದೀಶ ಶೆಟ್ಟರ ಕಾಲ್ ಮಾಡಿದ್ದರು.ನಾನು ಬಿಜೆಪಿಗೆ ಹೋಗ್ತಿದ್ದೇನೆ ರಾಜೀನಾಮೆ ಕೊಡತಿದ್ದೇನೆ ಎಂದು ಹೇಳಿದರು.ಅಲ್ಲದೇ ಮೇಲ್ ಮೂಲಕ ರಾಜೀನಾಮೆ ಕಳಿಸ್ತೀನಿ ಎಂದರು.ಯಾವುದೇ ಸದಸ್ಯ ಆದರೂ ನೇರವಾಗಿ ಬಂದು ರಾಜೀನಾಮೆ ಕೊಡಬೇಕು ಎಂದು ಹೇಳಿದ್ದೇನೆ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.