ನಿಗಮ ಮಂಡಳಿ ಪಟ್ಟಿ ಪೈನಲ್.ಕೆಲವೇ ಘಂಟೆಗಳಲ್ಲಿ ಅನೌನ್ಸ್.ಧಾರವಾಡ ಜಿಲ್ಲೆಗೆ ಪ್ರಸಾದ ಅಬ್ಬಯ್ಯಗೆ ಕ್ಯಾಬಿನೆಟ್ ದರ್ಜೆಯ ಮಂಡಳಿ.ವಿನೋದ ಅಸೂಟಿ ಮತ್ತು ಶಾಕೀರ ಸನದಿಗೂ ಒಲಿದ ಅಧ್ಯಕ್ಷ ಸ್ಥಾನ.
ಬೆಂಗಳೂರ:- ಕಳೆದ ಹಲವು ದಿನಗಳಿಂದ ಇಂದು,ನಾಳೆ ಎನ್ನುತ್ತಿದ್ದ ನಿಗಮ ಮಂಡಳಿ ಅದ್ಯಕ್ಷ ಸ್ಥಾನದ ಪಟ್ಟಿ ಬಿಡುಗಡೆ ಇನ್ನೇನು ಕೆಲವೇ ಘಂಟೆಗಳಲ್ಲಿ ಅನೌನ್ಸ್ ಆಗಲಿದೆ.
ಬಿಡುಗಡೆ ಆಗಲಿರುವ ಪಟ್ಟಿಯಲ್ಲಿ ಧಾರವಾಡ ಜಿಲ್ಲೆಗೆ ಮೂರು ಅದ್ಯಕ್ಷ ಸ್ಥಾನ ಒಲಿದು ಬಂದಿದೆ.ಮೂರು ಬಾರಿ ಹೆಟ್ರಿಕ್ ಸಾಧಿಸಿರುವ ಸರಳ ಸಜ್ಜನಿಕೆಗೆ ಹೆಸರಾಗಿರುವ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನದ ಕೊಳಚೆ ಅಭಿವ್ರದ್ದಿ ನಿಗಮ ಸಿಕ್ಕಿದೆ.ಅಲ್ಲದೇ ನವಲಗುಂದ ಕ್ಷೇತ್ರದ ತ್ಯಾಗಮಯಿ ಯುವ ನಾಯಕ ವಿನೋದ ಅಸೂಟಿಗೆ ಹಾಗೂ ಶಾಕೀರ ಸನದಿ ಅವರಿಗೂ ನಿಗಮ ಮಂಡಳಿ ಅದ್ಯಕ್ಷ ಸ್ಥಾನ ಒಲಿದು ಬಂದಿದೆ.
ಅಳೆದೂ ತೂಗಿ ಧಾರವಾಡ ಜಿಲ್ಲೆಗೆ ಮೂರು ಸ್ಥಾನಗಳನ್ನು ನಿಗಮ ಮಂಡಳಿ ಅದ್ಯಕ್ಷ ಸ್ಥಾನ ನೀಡಲಾಗಿದೆ ಎನ್ನಲಾಗಿದೆ.