ಧಾರವಾಡ ಜಿಲ್ಲೆಯ ಸೈಬರ್ ಕ್ರೈಂ ಪೋಲೀಸ ಠಾಣೆಯಲ್ಲಿ ತ್ರಿಮೂರ್ತಿಗಳ ಅಂಧಾ ದರ್ಭಾರ.ಹೇಳೋರಿಲ್ಲಾ,ಕೇಳೋರಿಲ್ಲಾ.ಹೋದಲ್ಲೆಲ್ಲಾ 161.
ಧಾರವಾಡ:- ಹೌದು ಧಾರವಾಡ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಂದರೆ ಧಾರವಾಡ,ನವಲಗುಂದ,ಕುಂದಗೋಳ,ಕಲಘಟಗಿ,ಹುಬ್ಬಳ್ಳಿ ಗ್ರಾಮೀಣ,ತಾಲೂಕಿನಲ್ಲಿ ಡ್ರಗ್ಸ್, ಚೀಟಿಂಗ್ ಪ್ರಕರಣಗಳನ್ನ ನೋಡಿಕೊಳ್ಳಬೇಕಾದ ಪೋಲೀಸರು ಮಾಡುತ್ತಿರುವುದೇ ಬೇರೆ.
ಬೆಳಗು ಹರಿದರೆ ಸಾಕು,ಅಲ್ಲಿಯ ತ್ರಿಮೂರ್ತಿಗಳು ನುಂಗಣ್ಣನ ನೇತ್ರತ್ವದಲ್ಲಿ ಕಾರು ತೊಗೊಂಡು ಬೋಗೂರ ಮಾರ್ಗವಾಗಿ ಕರ್ಜಗಿ ಕಡೆ ದಂಡಯಾತ್ರೆ ಆರಂಬಿಸಿಯೇ ಬಿಡುತ್ತಾರೆ.ಧಾರವಾಡದಿಂದ ರೂಟ್ ಪ್ರಕಾರ ಸೀಟಿ ಹೊಡಿತಾ ಹೋಗಿ ಸಿಕ್ಕಷ್ಟು ಪ್ರಕರಣಗಳಲ್ಲಿ 161 ಮಾಡಿಕೊಂಡು ಕಛೇರಿಗೆ ಬಂದು ನಾಗನಹಳ್ಳಿಯಲ್ಲಿ !!ಗೌಡರ ಗದ್ದಲ!! ನಾಟಕ ಮುಗಿಸತಾರೆ.ಇವರೆಲ್ಲಾ ನಾಟಕವನ್ನ ಒಮ್ಮೆ ಎಸ್ ಪಿ ಸಾಹೇಬ್ರು ನೋಡಲೇ ಬೇಕು.
ಕಳೆದ ಒಂದು ವಾರದ ಹಿಂದೆ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮಕ್ಕೆ ಹೋದ CEN ತಂಡ ಮಟ್ಕಾ ಬುಕ್ಕಿಗಳಿಬ್ಬರನ್ನ ಕಾರಿನಲ್ಲಿ ಅನಾಮತ್ ಎತ್ತಾಕಿಕೊಂಡು ಬಂದು ಇನ್ನೇನು ಕುಂದಗೋಳ ಪೋಲೀಸ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಆರೆಸ್ಟ್ ಮಾಡೇ ಬಿಟ್ಟರು ಅಂತಾ ಪೋಸ್ ಕೊಟ್ಟು ನಡು ದಾರಿಯಲ್ಲಿಯೇ 161 ಮಾಡಿ ಬಿಡತಾರೆ.ಅಲ್ಲದೇ ಗುಡಗೇರಿಯಲ್ಲಿಯೂ ಒಂದು ಬೈಕ್ ಸಮೇತ ಮಟ್ಕಾದವನನ್ನ ತಂದ ನುಂಗಣ್ಣರು ನಡು ದಾರಿಯಲ್ಲಿಯೇ ಕೈ ಬಿಟ್ಟು ಕಳಿಸಿದ್ದಾರಂತೆ.ಅಲ್ಲದೇ ಮೊನ್ನೆ ಶಲವಡಿಯಲ್ಲಿ ಗಾಂಜಾ ಕೇಸ್ ಮಾಡಿ ಮೂರನೇ ಆರೋಪಿ ನವೀನ ಎಂಬುವರನ್ನು ಬಿಡಲು ಲಕ್ಷ ಲಕ್ಷ ರೂಪಾಯಿಗಳನ್ನು (1.25)ತೆಗೆದುಕೊಂಡಿದ್ದು ಗುಟ್ಟಾಗಿ ಏನು ಉಳಿದಿಲ್ಲಾ.
ಹುಬ್ಬಳ್ಳಿ ಗ್ರಾಮೀಣದಿಂದ ಸೈಬರ್ ಕ್ರೈಂಗೆ ನುಂಗಣ್ಣ ಕಾಲಿಟ್ಟಗಳಿಗೆಯಿಂದ ಸುರುವಾದ ಅಂಧಾ ದರ್ಬಾರ್ ಧಾರವಾಡ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿ ಬಿಟ್ಟಿದ್ದಾರೆ.ನುಂಗಣ್ಣ ಬಂದಾನ ಅಂದರೆ ಅಕ್ರಮ ದಂಧೆಕೋರರು ಲಕ್ಷ್ಮೀ ಯನ್ನ ಹುಡುಕಲೇ ಬೇಕು ಅಂತಹ ಹೆದರಿಕೆಯನ್ನ ನುಂಗಣ್ಣ ಜಿಲ್ಲೆಯಲ್ಲಿ ಇಟ್ಟಿದ್ದಾನೆ.
ಧಾರವಾಡ ಜಿಲ್ಲಾ ಖಡಕ್ ಪೋಲೀಸ ವರಿಷ್ಠಾಧಿಕಾರಿ ಎಂದೇ ಹೆಸರು ಮಾಡಿರುವ SP ಸಾಹೇಬ್ರಗೆ ಮಟ್ಕಾ,ಜೂಜಾಟ,ಅಕ್ರಮ ಸರಾಯಿ ಅಂದರೆ ಆಗಲ್ಲ.ಮೀಟಿಂಗ್ ಕರೆದಾಗೊಮ್ಮೆ ಎಲ್ಲ ತಾಲೂಕಿನ ಪಿಆಯ್ ಗಳಿಗೆ ಎಷ್ಟು ಕೇಸ್ ಮಾಡಿದಿರಿ,ಜಿಲ್ಲೆಯಲ್ಲಿ ಗಾಂಜಾ,ಮಟ್ಕಾ.ಜೂಜಾಟ ನಿಲ್ಲಬೇಕು ಅಂಥಾ ವಾರ್ನಿಂಗ್ ಮಾಡುವ ಎಸ್ ಪಿ ಸಾಹೇಬ್ರು ಸೈಬರ್ ಕ್ರ್ಯೆಂನ ತ್ರಿಮೂರ್ತಿ ನುಂಗಣ್ಣರನ್ನ ಮೇಲೆ ಕ್ರಮಕೈಕೊಳ್ಳತಾರಾ ಕಾದು ನೋಡಬೇಕಾಗಿದೆ.