ಸಂತೋಷ್‌ ಲಾಡ್‌ ಫೌಂಡೇಶನ್‌ನಿಂದ 26 ಎಲೆಕ್ಟ್ರಿಕ್‌ ಆಟೋ ವಿತರಣೆ

Share to all

ಸಂತೋಷ್‌ ಲಾಡ್‌ ಫೌಂಡೇಶನ್‌ನಿಂದ 26 ಎಲೆಕ್ಟ್ರಿಕ್‌ ಆಟೋ ವಿತರಣೆ
============
ಹುಬ್ಬಳ್ಳಿ:-75 ನೇ ಗಣರಾಜ್ಯೋತ್ಸವದ ಅಂಗವಾಗಿ ಸಂತೋಷ್‌ ಲಾಡ್‌ ಫೌಂಡೇಶನ್‌ ವತಿಯಿಂದ 26 ಎಲೆಕ್ಟ್ರಿಕ್‌ ಆಟೋ ರಿಕ್ಷಾಗಳನ್ನು ಮಾನ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂತೋಷ್ ಲಾಡ್ ಫೌಂಡೇಶನ್ ರೂವಾರಿ ಶ್ರೀ ಸಂತೋಷ್ ಲಾಡ್ ಅವರು ವಿತರಿಸಿದರು‌.

ಹುಬ್ಬಳ್ಳಿಯ ಬೈರೇದೇವರ ಕೊಪ್ಪದ ಪಿ ಬಿ ರಸ್ತೆಯ ದರ್ಗಾ ಹತ್ತಿರದ ಹಿಂದೂಸ್ತಾನ್‌ ಮೋಟಾರ್ಸ್‌ ನಲ್ಲಿ ಈ ಆಟೋಗಳನ್ನು ವಿತರಣೆ ಮಾಡಲಾಯಿತು. ಈ ಆಟೋಗಳಿಗೆ ಡೌನ್‌ಪೇಮೆಂಟ್‌ ಮಾಡಲಾಗಿದ್ದು, ಬ್ಯಾಂಕ್‌ನ ಲೋನ್‌ ಸೌಲಭ್ಯವನ್ನೂ ಒದಗಿಸಿ ವಿತರಿಸಲಾಗಿದ್ದು ವಿಶೇಷ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಂತೋಷ್‌ ಲಾಡ್‌ ಅವರು, ನಮ್ಮ ಫೌಂಡೇಶನ್‌ ಒಂದಲ್ಲ ಒಂದು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿದ್ದು ಇಂದು ಎಲೆಕ್ಟ್ರಿಕ್‌ ಆಟೊಗಳನ್ನು ನೀಡಿದೆ. ಇವುಗಳು ಅವರ ಜೀವನಕ್ಕೆ ನೆರವಾಗಲಿವೆ. ಇವುಗಳನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಚಾಲಕರಿಗೆ ಕಿವಿಮಾತು ಹೇಳಿದರು.

ಮಾಲಿನ್ಯ ಮುಕ್ತ ವಾತಾವರಣ ನಿರ್ಮಿಸುವಲ್ಲಿ ಎಲೆಕ್ಟ್ರಿಕ್‌ ವಾಹನಗಳು ಹೆಚ್ಚು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಸಂತೋಷ್‌ ಲಾಡ್‌ ಫೌಂಡೇಶನ್‌ ಸಹ ಸುಸ್ಥಿರ ವಾತಾವರಣಕ್ಕೆ ಕೊಡುಗೆ ನೀಡಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author