ಶೆಟ್ಟರ್ ಆಗಮನದಿಂದ ನಾವು ಸೆಂಟ್ರಲ್ ಕ್ಷೇತ್ರದಲ್ಲಿ ಸೋತಿದ್ದೇವೆ:ಕಾರ್ಯಕರ್ತನಿಗೆ MLC ಟಿಕೆಟ್ ಡಿಕೆಶಿ ಹೇಳಿಕೆ
ಬೆಂಗಳೂರು: ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾದ್ಯಮ ಸಂವಹನ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಾಂಗ್ ನೀಡಿದ್ದಾರೆ. ವಿಧಾನಸಭಾ ಪೂರ್ವದಲ್ಲಿ ತಮಗೆ ಬಂದಿರುವ ಮಾಹಿತಿ ಪ್ರಕಾರ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲವು ಸಾದಿಸುತ್ತಿತ್ತು ಆದ್ರೆ ಶೆಟ್ಟರ್ ಆಗಮನದಿಂದ ಗೆಲವು ಸೋಲಾಗಿ ಪರಿವರ್ತನೆ ಆಗಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಚುನಾವಣೆ ಯಲ್ಲಿ ಗೆದ್ದೆ ಗೆಲ್ತಿವಿ ಅಂತ ನಮಗೆ ಸೆಂಟ್ರಲ್ ಕ್ಷೇತ್ರದಲ್ಲಿ ಇತ್ತು.ಒಬ್ಬ ಹಿರಿಯ ಮುತ್ಸದ್ಧಿ ನಾಯಕ ಅನ್ಯಾಯ ಆಗಿದೆ ಅಂತ ಬಿಜೆಪಿ ಮೇಲೆ ದೊಡ್ಡ ದೊಡ್ಡ ಆರೋಪ ಮಾಡಿ ಬಂದ್ರು .ನಮ್ಮ ಪಕ್ಷದ ಕಾರ್ಯಕರ್ತ ತ್ಯಾಗ ಮಾಡಿದ ಆದ್ರೂ ಶೆಟ್ಟರ್ 35 ಸಾವಿರ ಅಂತರದಿಂದ ಸೋತರು.ಸೋತರೂ ಅವರ ಹಿರತನೆಕ್ಕೆ ನಾವು ಬೆಲೆ ಕೊಟ್ಟು MLC ಆಗಿ ಮಾಡಿದ್ದೇವೆ.ಶೆಟ್ಟರ್ ಅನೇಕ ಆರೋಪಗಳನ್ನು ಬಿಜೆಪಿ ಮೇಲೆ ಮಾಡಿದ್ದಾರೆ ಅದಕ್ಕೆ ಅವರೇ ಉತ್ತರ ಕೊಡಬೇಕು ಎಂದಿದ್ದಾರೆ.
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಶೆಟ್ಟರ್ ವಿರುದ್ಧ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಿದ್ದರು.ಆದ್ರೆ ಶೆಟ್ಟರ್ ಬರುವಿಕೆಯಿಂದ ಅನಿವಾರ್ಯವಾಗಿ ಟಿಕೆಟ್ ತ್ಯಾಗ ಮಾಡಿದ್ದರು ಇದೀಗ ಇದೆ ವಿಚಾರ ಚರ್ಚೆಗೆ ಬರುತ್ತಿದ್ದು ರಜತ್ ಉಳ್ಳಾಗಡ್ಡಿಮಠ ಮೇಲೆ ಕಾಂಗ್ರೆಸ್ ನಾಯಕರು ಗಮನ ಹರಿಸುವಂತೆ ಆಗಿದೆ. ಇನ್ನು ಕಳೆದ ದಿನ ಕೂಡ ರಜತ ಶೆಟ್ಟರ್ ಮೇಲೆ ಆರೋಪ ಮಾಡಿದ್ದು ಇದೀಗ ಲೋಕಸಭೆ ತಯಾರಿ ನಡೆಸುತ್ತಿದ್ದಾರೆ.ರಜತ ಉಳ್ಳಾಗಡ್ಡಿಮಠಗೆ ಲೋಕಸಭೆ ಟಿಕೆಟ್ ಅಥವಾ ಎಂಎಲ್ಸಿ ಸ್ಥಾನಮಾನ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ನೀಡಬಹುದು ಎಂದು ಅಂದಾಜು ಮಾಡಲಾಗುತ್ತಿದೆ.