ಎಂಟು ತಿಂಗಳ ನಂತರ ಸಕ್ರೀಯ ರಾಜಕಾರಣಕ್ಕೆ ಶಂಕರ ಪಾಟೀಲ ಎಂಟ್ರಿ.ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗಿ.
ಬೆಂಗಳೂರು:- ಕಳೆದ ವಿಧಾನಸಭೆ ಚುನಾವಣೆಯ ಸೋಲಿನ ನಂತರ ಮನೆಯ ಸಮಸ್ಯೆ ಹಾಗೂ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಇಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಜಿ ಸಿಎಂ ಜಗದೀಶ ಶೆಟ್ಟರ ವಾಪಸ್ಸು ಬಿಜೆಪಿಗೆ ಬಂದಿದ್ದು, ಮತ್ತು ರಾಜ್ಯ ಬಿಜೆಪಿ ಅದ್ಯಕ್ಷರಾಗಿ ಬಿ ವಾಯ್ ವಿಜಯೇಂದ್ರ ಆಯ್ಕೆಯಾದ ನಂತರ ಶಂಕರ ಪಾಟೀಲ ಮುನೇನಕೊಪ್ಪ ಮತ್ತೆ ಆ್ಯಕ್ಟಿವ್ ಆದಂತಾಗಿದೆ.