2024 ಲೋಕಸಭೆಗೆ ನಾನೇ ಅಬ್ಯೆರ್ಥಿ.ನಾನು ಈಗಾಗಲೇ ಚುನಾವಣೆ ಪ್ರಚಾರ ನಡೆಸಿದ್ದೇನೆ ಕೇಂದ್ರ ಸಚಿವ ಜೋಶಿ.
ಹುಬ್ಬಳ್ಳಿ:-ಲೋಕಸಭೆ ಚುನಾವಣೆಗೆ ಈಗಾಗಲೇ ನಾನು ಮತ್ತು ನಮ್ಮ ಬಿಜೆಪಿ ಟೀಮ್ ಪ್ರಚಾರ ನಡೆಸಿದೆ.ಟಿಕೆಟ್ ಬಗ್ಗೆ ಗೊಂದಲ ಇಲ್ಲಾ.ನಾನೇ ಅಬ್ಯೆರ್ಥಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಜಗದೀಶ ಶೆಟ್ಟರ ಅವರು ಮರಳಿ ಬಿಜೆಪಿಗೆ ಬಂದಿರುವುದು ಖುಷಿ ಆಗಿದೆ.ಇವತ್ತು ಬೆಂಗಳೂರಿನ ಕಾರ್ಯಕಾರಿಣಿಯಲ್ಲಿ ಅವರ ಜೊತೆ ಮಾತನಾಡಿದ್ದೇನೆ.
ಶೆಟ್ಟರ್ ಅವರು ಬಿಜೆಪಿಗೆ ಬಂದಿರುವುದರಿಂದ ಧಾರವಾಡ ಲೋಕಸಭೆಗೆ ಅವರಿಗೆ ಬಿಜೆಪಿ ಟಿಕೆಟ್ ಅಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೋಶಿ ನಾನೇ ಅಬ್ಯೆರ್ಥಿ,ಈಗಾಗಲೇ ಪ್ರಚಾರ ನಡೆಸಿದ್ದೇನೆ ಎಂದು ಎದ್ದಿರುವ ಊಹಾಪೋಹಗಳಿಗೆ ಪ್ರಲ್ಹಾದ ಜೋಶಿ ತೆರೆ ಎಳೆದಿದ್ದಾರೆ.