ಶೆಟ್ಟರ್ ವಿರುದ್ಧ ಸಿಡಿದೆದ್ದ ಲಿಂಗಾಯತ ಸಮುದಾಯ.ಶೆಟ್ಟರ ಹಿಂದಿಲ್ಲಾ ಲಿಂಗಾಯತರು ಅಂತಾ ತೋರಿಸುವ ಡ್ರಾಮಾ ಸೀನ್ಸ್.

Share to all

ಶೆಟ್ಟರ್ ವಿರುದ್ಧ ಸಿಡಿದೆದ್ದ ಲಿಂಗಾಯತ ಸಮುದಾಯ.ಶೆಟ್ಟರ ಹಿಂದಿಲ್ಲಾ ಲಿಂಗಾಯತರು ಅಂತಾ ತೋರಿಸುವ ಡ್ರಾಮಾ ಸೀನ್ಸ್.

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಾಸ್ಸ ಹೋಗತಿದ್ದಂತೆ ಶೆಟ್ಟರ್ ವಿರುದ್ದ ಲಿಂಗಾಯತ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗೋಷ್ಠಿ ಏರ್ಪಡಿಸಿದ ಲಿಂಗಾಯತ ನಾಯಕರು, ನಮ್ಮ ಸಮುದಾಯಕ್ಕೆ ಶೆಟ್ಟರ್ ಮೋಸ ಮಾಡಿ ಹೋಗಿದ್ದಾರೆ.

ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಯಾಕೆ ಬಿಜೆಪಿಗೆ ಹೋದ್ರು ಅನ್ನೋದೆ ನಿಗೂಢವಾಗಿದೆ. ಇಂತವರಿಂದ ಯುವಕರಿಗೆ ಏನೂ ಸಂದೇಶ ಹೋಗತ್ತೆ. ಶೆಟ್ಟರ್ ಹೋಗಿರೋದು ಸಮಾಜಕ್ಕೆ ಅನ್ಯಾಯ ಆಗಿದೆ.
ಹುಬ್ಬಳ್ಳಿ ಧಾರವಾಡದಲ್ಲಿ ಒಬ್ಬ ನೀತಿಶ್ ಕುಮಾರ್ ಹುಟ್ಟಿದ್ದಾರೆ.
ನಾವ ಬಿಹಾರಕ್ಕೆ ಹೋಗೋದು‌ ಬೇಡಾ, ಜಗದೀಶ್ ಶೆಟ್ಟರ್ ಮತ್ತೊಬ್ಬ ನಿತೀಶ್ ಕುಮಾರ್
ಸ್ವಾರ್ಥಕ್ಕಾಗಿ ಇವತ್ತು ಇಲ್ಲೆ ನಾಳೆ ಮತ್ತೊಂದು ಕಡೆ ಅನ್ನೋದಕ್ಕೆ ದೇಶದಲ್ಲಿ ಜಗದೀಶ್ ಶೆಟ್ಟರ್ ಉದಾಹರಣೆ. ನೀತಿಗೆಟ್ಟ ರಾಜಕಾರಣ ಮಾಡೋರ ಹಿಂದೆ ಸಮಾಜ ಇಲ್ಲ.

ಸಮಾಜದ ನಂಬಿಕೆಯನ್ನ ಜಗದೀಶ್ ಶೆಟ್ಟರ್ ಕಳೆದುಕೊಂಡಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಗ ಬಿಜೆಪಿಗೆ ಹೋದಾಗ ಹಿಗ್ಗಾ ಮುಗ್ಗಾ ಬೈದಿದ್ರು. ಒಂದು ವಾರದ ಹಿಂದೆ ಕೂಡಾ ಬಿಜೆಪಿ ವಿರುದ್ದ ಮಾತಾಡಿದ್ರು. ಆದ್ರೆ ಇದೀಗ ಶೆಟ್ಟರ್ ಬಿಜೆಪಿಗೆ ಯಾಕೆ ಹೋದ್ರು ಅನ್ನೋದೆ ನಿಗೂಢ ಪ್ರಶ್ನೆ. ಎಂದು ಲಿಂಗಾಯತ ಮುಖಂಡರು ಜಗದೀಶ್ ಶೆಟ್ಟರ್ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author