ಲೋಕಸಭೆಗೆ ಯಾವ ಕ್ಷೇತ್ರ ಅಂತಾ ಗೊತ್ತಿಲ್ಲಾ.ಹೈಕಮಾಂಡ ಮಾತಿಗೆ ಬದ್ಧ ಜಗದೀಶ.ಶೆಟ್ಟರ.
ಹುಬ್ಬಳ್ಳಿ:- ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಮೇಲೆ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದ ಜಗದೀಶ್ ಶೆಟ್ಟರಗೆ ಅದ್ದೂರಿ ಸ್ವಾಗತ ನೀಡಲಾಯಿತು.
ನಂತರ ಮಾತನಾಡಿದ ಜಗದೀಶ್ ಶೆಟ್ಟರ ನಾನು ಪ್ರವಾಸದ ಮಾಡಿದ ಕಡೆಯಲ್ಲೆಲ್ಲಾ ಬಿಜೆಪಿಗೆ ಮರಳಿ ಬರುವಂತೆ ಕಾರ್ಯಕರ್ತರ ಒತ್ತಡ ಇತ್ತು.ಅಲ್ಲದೇ ಬಿಜೆಪಿ ಹೈ ಕಮಾಂಡ್ ಸಹ ಕರೆದರು ಬಂದಿದ್ದೇನೆ ಎಂದರಲ್ಲದೇ ಲೋಕಸಭೆ ಚುನಾವಣೆ ವಿಚಾರ ಯಾವ ಕ್ಷೇತ್ರ ಅಂತಾ ಗೊತ್ತಿಲ್ಲಾ. ಹೈಕಮಾಂಡ್ ಏನ ಹೇಳುತ್ತೇ ಅದಕ್ಕೆ ಬದ್ದ ಎಂದು ಶೆಟ್ಟರ ಹೇಳಿದರು.
ಈ ಒಂದು ಸಮಯದಲ್ಲಿ ಶಾಸಕ ಮಹೇಶ.ಟೆಂಗಿನಕಾಯಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ. ಮಾಜಿ ಶಾಸಕ ಎಸ್ ಆಯ್ ಚಿಕ್ಕನಗೌಡರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.