ಲೋಕಸಭೆಗೆ ಶಂಕರ ಪಾಟೀಲಮುನೇನಕೊಪ್ಪ ಎಂಟ್ರಿ ಫಿಕ್ಸ್. ಪತ್ರಿಕಾಗೋಷ್ಠಿಯಲ್ಲಿ ಹೊಸ ಬಾಂಬ್.ನಾಳೆ ಮಹತ್ವದ ಪತ್ರಿಕಾಗೋಷ್ಠಿ.

Share to all

ಲೋಕಸಭೆಗೆ ಶಂಕರ ಪಾಟೀಲಮುನೇನಕೊಪ್ಪ ಎಂಟ್ರಿ ಫಿಕ್ಸ್. ಪತ್ರಿಕಾಗೋಷ್ಠಿಯಲ್ಲಿ ಹೊಸ ಬಾಂಬ್.ನಾಳೆ ಮಹತ್ವದ ಪತ್ರಿಕಾಗೋಷ್ಠಿ.

ಹುಬ್ಬಳ್ಳಿ: ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಈ ಬಾರಿ ಲೋಕಸಭೆ ಚುನಾವಣೆ ಎದುರಿಸಲು ಸನ್ನದ್ಧರಾಗಿದ್ದಾರೆಂದು ಹೇಳಲಾಗಿದ್ದು, ನಾಳೆ ಅವರು ಪತ್ರಿಕಾಗೋಷ್ಠಿ ಕರೆದಿದ್ದು, ಮಾಹಿತಿಯನ್ನ ಹೊರ ಹಾಕಲಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.

ಕಳೆದ ಅಗಸ್ಟ್‌ನಲ್ಲಿ ಬಿಜೆಪಿಯ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿ ಹಬ್ಬಿತ್ತು. ಈ ಸಮಯದಲ್ಲಿ ಮಾಧ್ಯಮಗಳ ಮುಂದೆ ಬಂದಿದ್ದ ಮುನೇನಕೊಪ್ಪ ಅವರು, ಜನೇವರಿವರೆಗೂ ನಾನು ರಾಜಕೀಯದಲ್ಲಿ ಸಕ್ರಿಯವಾಗಿರಲ್ಲ ಎಂದಿದ್ದರು.

ಅಷ್ಟೇ ಅಲ್ಲ, ಲಿಂಗಾಯತರಿಗೆ ಪಕ್ಷದಲ್ಲಿ ಅನ್ಯಾಯ ನಡೆಯುತ್ತಿದೆ ಎಂದಿದ್ದರು. ಸಂಸದ ಪ್ರಲ್ಹಾದ ಜೋಶಿಯವರು ಜಿಲ್ಲೆಯ ಜವಾಬ್ಧಾರಿ ವಹಿಸಿಕೊಳ್ಳಬೇಕೆಂದು ಕೇಳಿಕೊಂಡಿದ್ದರು. ಇದಾದ ನಂತರ ಕಾಂಗ್ರೆಸ್ ಪಕ್ಷವನ್ನ ಸೇರಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನ ಮರಳಿ ಪಕ್ಷಕ್ಕೆ ಕರೆದುಕೊಂಡು ಬರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಈಗ ಲೋಕಸಭೆ ಚುನಾವಣೆಯಲ್ಲಿ ಇವರೇ ಅಭ್ಯರ್ಥಿ ಎಂಬುದು ತೀವ್ರ ಚರ್ಚೆಗೆ ಕಾರಣವಾಗುತ್ತಿದ್ದು, ನಾಳೆಯ ಪತ್ರಿಕಾಗೋಷ್ಠಿ ಅತೀವ ಕೌತುಕ ಮೂಡಿಸಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author