ಜಗದೀಶ ಶೆಟ್ಟರ ಅವರನ್ನು ಬಿಜೆಪಿಗೆ ಕರೆತರುವಲ್ಲಿ ಕೇಂದ್ರ ಸಚಿವರ ಪಾತ್ರ ದೊಡ್ಡದಿದೆ.ಡೇ ಒನ್ನ್ ದಿಂದ ಅವರಿಗೆ ಎಲ್ಲವೂ ಗೊತ್ತಿದೆ ಶಂಕರ ಪಾಟೀಲ.
ಹುಬ್ಬಳ್ಳಿ:- ಕಳೆದ ಮೂವತ್ತು,ನಲವತ್ತು ವರ್ಷಗಳಿಂದ ಬಿಜೆಪಿ ಪಕ್ಷವನ್ನ ಕಟ್ಟಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋಗಿದ್ದ ಜಗದೀಶ್ ಶೆಟ್ಟರ ಅವರನ್ನು ಮರಳಿ ಬಿಜೆಪಿಗೆ ಕರೆತರುವಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪಾತ್ರ ದೊಡ್ಡದಿದೆ ಎಂದು ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.
ಜಗದೀಶ ಶೆಟ್ಟರ ಅವರನ್ನು ಯಾವಾಗ ಮರಳಿ ಬಿಜೆಪಿಗೆ ಕರೆತರುವ ಪ್ರಯತ್ನಗಳು ನಡೆದವೋ ಅಂದಿನಿಂದ ಎಲ್ಲಾ ವಿದ್ಯಮಾನಗಳು ಜೋಶಿಯವರ ಗಮನಕ್ಕೆ ಇತ್ತು.
ಅಲ್ಲದೇ ಲೋಕಸಭೆಗೆ ನಾನು ಅಬ್ಯೆರ್ಥಿ ಅಂತಾ ಊಹಾಪೋಹಗಳು ಏನೂ ಇಲ್ಲಾ.ನಾನು ಲೋಕಸಭೆಗೆ ನಿಲ್ಲುವುದಿಲ್ಲಾ.ನಮ್ಮ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿಯವರೇ ಧಾರವಾಡ ಲೋಕಸಭೆಯ ಅಬ್ಯೆರ್ಥಿ. ಅವರು ಕೇಂದ್ರ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಅಲ್ಲದೇ ಜೋಶಿ ಅವರು ಮತ್ತು ಜಗದೀಶ ಶೆಟ್ಟರ ಹಲವು ವರ್ಷಗಳಿಂದ ಪಕ್ಷದಲ್ಲಿ ಜೋಡೆತ್ತುಗಳ ಹಾಗೆ ಪಕ್ಷ ಕಟ್ಟಿದ್ದಾರೆ. ಪಕ್ಷ ಬೆಳೆಸಿದ್ದಾರೆ. ಮುಂದೆಯೂ ಅವರಿಬ್ಬರೂ ಪಕ್ಷವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುವ ಕೆಲಸ ಮಾಡತಾರೆ ಎಂದು ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.