ಬಿಜೆಪಿ ರಾಜ್ಯಾದ್ಯಕ್ಷ ಬಿ ವಾಯ್ ವಿಜಯೇಂದ್ರ ಸ್ವಾಗತಕ್ಕೆ ಗಜ ಗಾತ್ರದ ಹೂವಿನ ಹಾರ ಸಿದ್ಧ.ಬಿಜೆಪಿ ಯುವ ಮುಖಂಡ ಅನೂಪ.ಬಿಜವಾಡ ಅವರಿಂದ ಹೂವಿನ ಹಾರ ತಯಾರಿ ಸಿದ್ಧತೆ.
ಹುಬ್ಬಳ್ಳಿ:- ರಾಜ್ಯ ಬಿಜೆಪಿಯ ಚುಕ್ಕಾಣೆ ಹಿಡಿದಿರುವ ಯುವ ಮುಖಂಡ ಬಿ ವಾಯ್ ವಿಜಯೇಂದ್ರ ಮೊದಲ ಬಾರಿಗೆ ಹುಬ್ಬಳ್ಳಿ ನಗರಕ್ಕೆ ಆಗಮಿಸುತ್ತಿದ್ದು ಅವರ ಸ್ವಾಗತಕ್ಕೆ ಬಿಜೆಪಿಯಿಂದ 25 ಪೂಟಿನ ಹೂವು ಹಾಗೂ ಸೇಬಿನ ಹಾರ ಸಿದ್ದಗೊಳ್ಳುತ್ತಿದೆ.
ನಗರದ ದುರ್ಗದಬೈಲಿನ ಹೂವಿನ ಅಂಗಡಿಯಲ್ಲಿ ಬಿಜೆಪಿ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಅದ್ಯಕ್ಷ ತಿಪ್ಪಣ್ಣ ಮಜ್ಜಿಗಿ ಅವರ ಮಾರ್ಗದರ್ಶನದಂತೆ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ಅನೂಪ.ಬಿಜವಾಡ ಅವರು ಹೂವಿನ ಹಾರ ಸಿದ್ಧಗೊಳಿಸಿದ್ದಾರೆ.
ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಅವರನ್ನು ಈ ಬ್ರಹತ್ ಗಾತ್ರದ ಹಾರವನ್ನು ಹಾಕಿ ಹುಬ್ಬಳ್ಳಿಗೆ ಸ್ವಾಗತ ಕೋರಲಿದ್ದಾರೆ ಬಿಜೆಪಿ ಮುಖಂಡರು.