ಪ್ರೇಯಸಿಯ ರುಂಡ ಚೆಂಡಾಡಿದ ಪಾಗಲ್ ಪ್ರೇಮಿಗೆ ಜೀವಾವಧಿ ಶಿಕ್ಷೆ – ತಪ್ಪು ಮಾಡಿದ ಪಾಗಲ್ ಪ್ರೇಮಿಗೆ ಶಿಕ್ಷೆ ನೀಡಿದ ಕೋರ್ಟ್
ವಿಜಯನಗರ
ಮಾಜಿ ಪ್ರೇಯಸಿಯ ರುಂಡ ಚೆಂಡಾಡಿದ ಪಾಗಲ್ ಪ್ರೇಮಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಹೊಸಪೇಟೆ ಸಿವಿಲ್ ಜಡ್ಜ್ ಸೀನಿಯರ್ ಡಿವಿಜನ್ ಹಾಗೂ JMFC ಕೋರ್ಟ್‌ನಿಂದ ತೀರ್ಪು ಹೊರಬಿದ್ದಿದ್ದು, ನ್ಯಾ. ಅಬ್ದುಲ್ ರೆಹಮಾನ್ ನಂದಡಗಿ ಆದೇಶ ಹೊರಡಿಸಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ಈ ಭೀಕರ ಘಟನೆ ಕಳೆದ ವರ್ಷ ಜುಲೈ 21ರಂದು ನಡೆದಿತ್ತು. ಅಪರಾಧಿ ಭೋಜರಾಜ ತನ್ನ ಮಾಜಿ ಪ್ರೇಯಸಿಯಾಗಿದ್ದ ನಿರ್ಮಲಾ (23) ಎಂಬಾಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದ.
ನಿರ್ಮಲಾಳನ್ನು ತನಗೆ ಮದುವೆ ಮಾಡಿಕೊಂಡುವಂತೆ ಈ ಪಾಗಲ್ ಪ್ರೇಮಿ ಭೋಜರಾಜ ಕೇಳಿದ್ದ. ಯುವತಿಯ ಮನೆಯವರು ಒಪ್ಪದಿದ್ದಾಗ ಬೇರೆ ಯುವತಿಯನ್ನು ಮದುವೆಯಾಗಿದ್ದ.
ಕೊಪ್ಪಳದಲ್ಲಿ ಬಿಎಸ್ಸಿ ನರ್ಸಿಂಗ್ ವಿಧ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ ಪರೀಕ್ಷೆಗಾಗಿ ಓದಲು ಕನ್ನಬೋರಯ್ಯಹಟ್ಟಿಗೆ ಬಂದಿದ್ದರು. ತನ್ನ ಮದುವೆಯಾಗಿ ಎರಡು ತಿಂಗಳ ನಂತರ ಊರಿಗೆ ಬಂದ ನಿರ್ಮಲಾಳ ತಲೆಯನ್ನು ಮಚ್ಚಿನಿಂದ ಕಡಿದು, ರುಂಡದೊಂದಿಗೆ ಠಾಣೆಗೆ ಬಂದು ಭೋಜರಾಜ ಶರಣಾಗಿದ್ದ. ರುಂಡವನ್ನು ಬೈಕ್‌ನ ಸೈಡ್ ಬ್ಯಾಗ್‌ನಲ್ಲಿಟ್ಟುಕೊಂಡು 8 ಕಿ.ಮೀ ದೂರದ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಠಾಣೆಗೆ ಹಾಜರಾಗಿದ್ದ.
ಭೋಜರಾಜ ವಿರುದ್ಧ ಕಾನಾಹೊಸಹಳ್ಳಿ ಠಾಣೆಯಲ್ಲಿ ಕೊಲೆ ಕೇಸ್ ಕೇಸ್ ದಾಖಲಾಗಿತ್ತು. ಈಗ ಹೊಸಪೇಟೆಯ JMFC ನ್ಯಾಯಾಲಯದಲ್ಲಿ ಕೊಲೆ ಪ್ರಕರಣದ ತೀರ್ಪು ಪ್ರಕಟ ಆಗಿದ್ದು, ಅಪರಾಧಿ ಭೋಜರಾಜನಿಗೆ ಜೀವಾವಧಿ ಶಿಕ್ಷೆ ವಿಧಿಸಿ JMFC ಕೋರ್ಟ್ ಆದೇಶ ನೀಡಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಟಿ. ಅಂಬಣ್ಣ ಸರ್ಕಾರದ ಪರ ವಾದ ಮಂಡಿಸಿದ್ದರು.