ಡೆನಿಸನ್ ರಹಸ್ಯ. ತಡರಾತ್ರಿವರೆಗೂ ನಡೆದ ಒಂದಾಗೋಣ ಬಾ” ಸಭೆ.ಒಂದಾದರಾ ಇಲ್ಲಾ.ಪೋಟೋ ಪೋಸ್ ಕೊಟ್ಟಿದ್ದಂತು ನಿಜ.

Share to all

!!!ಡೆನಿಸನ್ ರಹಸ್ಯ!!!. ತಡರಾತ್ರಿವರೆಗೂ ನಡೆದ “ಒಂದಾಗೋಣ ಬಾ” ಸಭೆ.ಒಂದಾದರಾ ಇಲ್ಲಾ.ಪೋಟೋ ಪೋಸ್ ಕೊಟ್ಟಿದ್ದಂತು ನಿಜ.

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದಲ್ಲಿ ತೀವ್ರ ಬೇಗುದಿಗೆ ಕಾರಣವಾಗಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಆಗಮನದ ನಂತರ ಮೊದಲ ಬಾರಿಗೆ ಧಾರವಾಡ ಜಿಲ್ಲೆಯ ಮುಖಂಡರು ಒಂದಾಗಿ ಸಭೆ ನಡೆಸಿರುವುದು ಬಹಿರಂಗವಾಗಿದೆ.

ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ರಾಜಧಾನಿಯಿಂದ ಮರಳಿದ ನಂತರ ಆರಂಭಗೊಂಡ ಸಭೆಯಲ್ಲಿ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್, ಎಂ.ಆರ್.ಪಾಟೀಲ, ಮಹೇಶ ಟೆಂಗಿನಕಾಯಿ, ತಿಪ್ಪಣ್ಣ ಮಜ್ಜಗಿ, ಸಂತೋಷ ಚವ್ಹಾಣ ಹಾಗೂ ವೀರಣ್ಣ ಸವಡಿ ಭಾಗವಹಿಸಿದ್ದರು.

ಜಗದೀಶ್ ಶೆಟ್ಟರ್ ಅವರು ಪಕ್ಷಕ್ಕೆ ಮರಳಿದ ನಂತರ ನಡೆದ ಮೊದಲ ಸಭೆ ಇದ್ದಾಗಿದ್ದು, ತೀವ್ರ ಕುತೂಹಲ ಮೂಡಿಸಿತ್ತು. ಪಕ್ಷದ ಉನ್ನತಿಗಾಗಿ ಒಗ್ಗಟ್ಟಿನಿಂದ ಇರುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಮುಖಂಡರು ತೆಗೆದುಕೊಳ್ಳುವ ತೀರ್ಮಾನಗಳು ಹೇಗಿರಬೇಕು ಎಂಬುದನ್ನ ಚರ್ಚೆ ಮಾಡಲಾಗಿದೆಯಂತೆ.
ಭಾರತೀಯ ಜನತಾ ಪಕ್ಷಕ್ಕಾಗಿ ಎಲ್ಲರೂ ಶ್ರಮ ವಹಿಸಿ, ಲೋಕಸಭೆಯಲ್ಲಿ ಗೆಲುವು ಸಾಧಿಸಬೇಕೆಂಬ ಅಚಲ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಅಂತೆ.

ಈ ಕುರಿತು ಕುಂದಗೋಳ ಶಾಸಕ ಎಂ.ಆರ್.ಪಾಟೀಲ ಉದಯ ವಾರ್ತೆಯೊಂದಿಗೆ ಮಾತನಾಡಿದ ಅವರು ಲೋಕಸಭೆ ಚುನಾವಣೆ ಕುರಿತು ಮಾತುಕತೆ ಆಯ್ತು ಅಷ್ಟೇ ಬೇರೇ ಇನ್ನೇನು ಇಲ್ಲಾ ಎಂದರು.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author