ಪತಿ ಪತ್ನಿ ನಡುವೆ ಜಗಳ ಹಚ್ಚಿದ ಧರ್ಮಗುರುವಿಗೆ ಧರ್ಮದೇಟು.ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ.
ಹುಬ್ಬಳ್ಳಿ: ಹುಬ್ಬಳ್ಳಿಯ ಹೆಗ್ಗೆರಿ ಚರ್ಚ್ ಬಳಿ ಕ್ರಿಶ್ಚಿಯನ್ ಧರ್ಮಗುರುವಿಗೆ ಧರ್ಮದೇಟು ಬಿದ್ದಿದೆ. ಫಾಸ್ಟರ್ ಸಂತೋಷ ಗಂಧದ ಎಂಬುವರಿಗೆ ನವೀನ್ ಒಳಗುಂದಿ ಎಂಬಾತ ಹಲ್ಲೆ ನಡೆಸಿದ್ದಾರೆ.
ಫಾಸ್ಟರ್ ಸಂತೋಷ್, ನವೀನ್ ದಂಪತಿ ನಡುವೆ ಕಲಹಕ್ಕೆ ಕಾರಣವಾಗಿದ್ದಾನೆಂದು ಹಲ್ಲೆ ನಡೆಸಿದ್ದಾರೆ. ನವೀನ್ ಪತ್ನಿ ಫ್ರೆನಿ ಸ್ನೇಹ ಬೆಳೆಸಿದ ಸಂತೋಷ್, ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿಸಿದ್ದಾನೆಂದು ಆರೋಪವಿದೆ.
ಸಂತೋಷ್ ಫ್ರೇನಿ ಜತೆಗೆ ಸಲುಗೆ ಬೆಳೆಸಿ ಹಣ ಸುಲಿಗೆ ಮಾಡುತ್ತಿದ್ದ ಎನ್ನಲಾಗಿದೆ. ಸಂತೋಷ ಗೆಳೆತನದ ಕಾರಣದಿಂದಾಗಿ ಫ್ರೆನಿ ನವೀನ್‌ನಿಂದ ದೂರವಾಗಿದ್ದಳು. ಇದರಿಂದ ಸಿಟ್ಟಿಗೆದ್ದ ನವೀನ್ ನಡುರಸ್ತೆಯಲ್ಲೇ ಕ್ರಿಶ್ಚಿಯನ್ ಧರ್ಮಗುರು ಆಗಿರುವ ಸಂತೋಷ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಹಲ್ಲೆ ವಿಡಿಯೊ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.