ಅಹಿಂದ ನಾಯಕಿಗೆ ಬಾಗಲಕೋಟೆ ಎಂಪಿ ಟಿಕೆಟ್ ಗೆ ಹೆಚ್ಚಿದ ಒತ್ತಡ.ರಕ್ಷಿತಾ ಈಟಿ ಪರವಾಗಿ ಬೆಂಗಳೂರು ಚಲೋಗೆ ಸಿದ್ಧತೆ.
ಬಾಗಲಕೋಟೆ:- 2024 ರ ಬಾಗಲಕೋಟೆ ಲೋಕಸಭೆ ಟಿಕೆಟ್ ಅನ್ನು ಅಹಿಂದ ನಾಯಕಿ ರಕ್ಷಿತಾ ಭರತ್ ಕುಮಾರ ಈಟಿ ಅವರಿಗೆ ನೀಡಬೇಕೆಂದು ಕಾಂಗ್ರೆಸ್ ಯುವ ಘಟಕ ಹಾಗೂ ರಕ್ಷಿತಾ ಅಭಿಮಾನಿಗಳ ಬಳಗ ಒತ್ತಾಯಿಸಿದ್ದಾರೆ.
ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಯವ ಘಟಕ ರಕ್ಚಿತಾ ಈಟಿ ಅವರು ಜನಸೇವಕಿ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವವರು.ಅಲ್ಲದೇ ಲಾಕ್ ಡೌನ ಸಂದರ್ಭದಲ್ಲಿ ಹಸಿದ ಹೊಟ್ಟೆಗೆ ಅನ್ನ ನೀಡಿದವರು.ಆದ್ದರಿಂದ ಅವರಿಗೇ ಲೋಕಸಭೆಯ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಾವಿತ್ರಿ ಗಾಜಿ.ಸುಮಾ ನಾಯಕ ಶಿವಾನಂದ ಪಟ್ಟದಕಲ್ಲು.ಮಲ್ಲಿಕಾರ್ಜುನ ಬೆಲ್ಲಗಜ್ಜರಿ.ನಿಂಗರಾಜ ಕಳ್ಳೇನವರ ಉಪಸ್ಥಿತರಿದ್ದರು.