ವಿದ್ಯಾಕಾಶಿ ಧಾರವಾಡಕ್ಕೆ ಮೆತ್ತಿದ ರಕ್ತದ ಕಲೆ.ಆರು ದಿನದಲ್ಲಿ ಐದು ಕೊಲೆಯಾದವೇ..?
ಧಾರವಾಡ:- ವಿದ್ಯಾಕಾಶಿ ಎಂದೇ ಖ್ಯಾತಿ ಪಡೆದಿರುವ ಧಾರವಾಡದಲ್ಲಿ ಇಂದು ಮತ್ತೊಂದು ಸಾವನ್ನಪ್ಪದೆ.ಧಾರವಾಡದ ಕಮಲಾಪುರದ ಹೂಗಾರ ಓಣಿಯಲ್ಲಿ ತಾಯಿಯಿಂದಲೆ ಮಗಳ ಕೊಲೆ ನಡೆದಿದೆ ಎನ್ನಲಾಗುತ್ತಿದೆ..
ಹೌದು ತಾಯಿಯ ಅನೈತಿಕ ಸಂಬಂಧಕ್ಕೆ ಮಗಳು ಅಡ್ಡಿಯಾಗಿದ್ದಾಳೆ ಎಂದು ತಾಯಿ ಜ್ಯೋತಿ ತನ್ನ ಕರುಳ ಕುಡಿಯನ್ನು ಕತ್ತರಿಸಿ ಹಾಕಿದಳಾ ಎಂಬ ಅನುಮಾನ ಮೂಡಿದೆ.
ಪಾಪಿ ತಾಯಿ ಮತ್ತು ಪ್ರಿಯಕರ ರಾಹುಲ್ ಸೇರಿ ಮಗಳನ್ನು ಕೊಲೆ ಮಾಡಿರಬಹುದು ಎಂದು ಹೇಳಲಾಗುತ್ತಿದ್ದು ಈಗ ಇಬ್ಬರೂ ಪೋಲೀಸರ ಅತಿಥಿಯಾಗಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಧಾರವಾಡ ಉಪನಗರ ಪೋಲೀಸರು ವಿಚಾರಣೆ ನಡೆಸಿದ್ದಾರೆ.