ಹಲವು ದಿನಗಳ ನಂತರ ಒಟ್ಟಿಗೆ ಕಾಣಿಸಿಕೊಂಡ ಬಸನಗೌಡ ಪಾಟೀಲ ಯತ್ನಾಳ ಹಾಗೂ ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ.
ನವದೆಹಲಿ:-ಬದ್ಧ ವೈರಿಗಳಂತೆ ಇದ್ದ ಬಿಜೆಪಿ ರಾಜ್ಯಾದ್ಯಕ್ಷ ಬಿ ವಾಯ್ ವಿಜಯೇಂದ್ರ ಹಾಗೂ ಹಿಂದೂ ಪೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ ಯತ್ನಾಳ ಇಂದು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ರಾಜ್ಯಾದ್ಯಕ್ಷರಾದ ನಂತರ ವಿಜಯೇಂದ್ರ ಜೊತೆ ಯತ್ನಾಳ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲಾ.ಆದರೆ ಇಂದು ಸಂಸತ್ತನಲ್ಲಿ ರಾಜ್ಯ ಬಿಜೆಪಿ ನಾಯಕರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.ಕೇಂದ್ರ ಸಚಿವ ಪ್ರಲ್ಹಾದ ಜೋಶಿ.ಬಸನಗೌಡ ಪಾಟೀಲ ಯತ್ನಾಳ. ಬಿ ವಿ ನಾಯಕ.ಮಾಜಿ ಸಚಿವ ರಮೇಶ ಜಾರಕಿಹೊಳಿ ಪೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಪಕ್ಷದ ರಾಜ್ಯಮಟ್ಟದ ಯಾವುದೇ ಕಾರ್ಯಕ್ರಮಗಳಲ್ಲಿ ಯತ್ನಾಳ ದೂರ ಉಳಿದಿದ್ದರು.ವಿಜಯಪುರದಲ್ಲಿ ವಿಜಯೇಂದ್ರ ಭೇಟಿ ವೇಳೆಯಲ್ಲೂ ಯತ್ನಾಳ ಕಾಣಿಸಿಕೊಂಡಿರಲಿಲ್ಲಾ.ಬದಲಿಗೆ ವಿಜಯೇಂದ್ರ ವಿರುದ್ಧ ಅನೇಕ ಬಾರಿ ಕಿಡಿಕಾರಿದ್ದರು.ಆದರೆ ಇಂದು ಅವರಿಬ್ಬರೂ ಮುಖಾ ಮುಖಿ ಭೇಟಿಯಾಗಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಜೊತೆ ಮಾತುಕತೆ ವೇಳೆ ಇದು ಆಕಸ್ಮಿಕ ಭೇಟಿಯೋ ಇಬ್ಬರ ನಾಯಕರ ರಾಜೀ ಸಂಧಾನವೋ ಚರ್ಚೆ ಆರಂಭವಾಗಿದ್ದಂತೂ ಸತ್ಯ.