ಬೆನಕನಹಳ್ಳಿ ಗ್ರಾಮದಲ್ಲಿ ವರಸಿದ್ದಿ ವಿನಾಯಕನ ಜಾತ್ರಾ ಮಹೋತ್ಸವ.ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿ ಮೆರವಣಿಗೆ.
ಹುಬ್ಬಳ್ಳಿ:-ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಇಂದು ಶ್ರೀ ವರಸಿದ್ದಿ ವಿನಾಯಕ ಜಾತ್ರಾ ಮಹೋತ್ಸವ ಜರುಗಿದ್ದು,
ಹೋಮ ಹವನ ಇತ್ಯಾದಿ ಕಾರ್ಯಕ್ರಮಗಳು ನಡೆದವು.
ಗಣಪನಿಗೆ ವರಸಿದ್ದಿ ವಿನಾಯಕ ಕಮೀಟಿಯವರು ಪುಷ್ಪಾಲಂಕಾರ ಮಾಡಿದ್ದು ಕಂಗೋಳಿಸುತ್ತಿದೆ.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು, ಸಾಯಂಕಾಲ ಶ್ರೀ ಶಿವಸಿದ್ದ ಸೋಮೇಶ್ವರ ಸ್ವಾಮಿಜಿಯವರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.