ಪವರ್ ಪುಲ್ ಸಮುದಾಯ ಸಂಘಟಕರ ಮೂಲ ಹುದ್ದೆ ಯಾವುದು? ಕಣ್ಮುಚ್ಚಿ ಕುಳಿತ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು.
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಗೆದ್ದ ಎತ್ತು ಬಾಲ ಹಿಡಿಯುವ ಸಮುದಾಯ ಸಂಘಟಕರ ಕಡೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಾಹೇಬ್ರು ಒಂದಿಷ್ಟು ಗಮನ ಹರಿಸಬೇಕಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಳೆದ ಹತ್ತು ವರ್ಷಗಳಿಂದ “ಸಿ”ದರ್ಜೆಯವರಾಗಿದ್ದರು ” ಎ” ದರ್ಜೆಯ ಜೋನಲ್ ಅಸಿಸ್ಟಂಟ್ ಕಮೀಷನರಾಗಿ ನಾವೇ ಬೇರೇ ನಮ್ಮ ಸ್ಟೈಲ್ಲೇ ಬೇರೆ. ಯಾರು ಬಂದರೇನು ನಮ್ಮನ್ನ ಆ ಕುರ್ಚಿಯಿಂದ ಕೆಳಗಿಳಿಸುವವರು ಇಲ್ಲಾ ಎಂದು ರೈಲು ಬಿಡುವ ಆ ಜೋಡೆತ್ತು ಮತ್ತಿಬ್ಬರನ್ನು ಜಾಗಾ ಖಾಲಿ ಮಾಡಸ್ತಾರ,ಇಲ್ಲಾ ಅವರಿಗೆ ಮಣಿ ಹಾಕ್ತಾರಾ ನೋಡಬೇಕಾಗಿದೆ.
ಮಹಿಳಾ ಸಬಲೀಕರಣ ಮಾಡುವ ಸಮುದಾಯ ಸಂಘಟನಾಧಿಕಾರಿಗಳನ್ನು ತಕ್ಷಣ ಅವರ ಮೂಲ ಹುದ್ದೆಗೆ ಕಳಿಸದಿದ್ದರೆ ಅವರ ವಿರುದ್ಧ ಲೋಕಾಯುಕ್ತ ಹಾಗೂ ನಗರಾಭಿವೃದ್ಧಿ ಇಲಾಖೆಗೆ ದೂರು ಸಲ್ಲಿಸಲು ಸಂಘಟನೆಯೊಂದು ಸಜ್ಜಾಗಿದೆ.