ಹಳೇಹುಬ್ಬಳ್ಳಿಯಲ್ಲಿ ಪೋಲೀಸ ಪುಟ್ ಪೆಟ್ರೋಲಿಂಗ್.ಮನೆ ಮನೆಗೆ ಪೋಲೀಸರು.ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸುತ್ತಿರುವ ಪಿಆಯ್ ಸುರೇಶ ಯಳ್ಳೂರ.
ಹುಬ್ಬಳ್ಳಿ:-ಹೌದ ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.ಧಾರವಾಡದಲ್ಲಿ ಒಂದೇ ವಾರದಲ್ಲಿ ಐದು ಕೊಲೆ ನಡೆದ ಬೆನ್ನಲ್ಲೇ ಇದನ್ನು ಗಂಭೀರವಾಗಿ ತಗೆದುಕೊಂಡಿರುವ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಪೊಲೀಸ್ ಬೀಟ್ ಹೆಚ್ಚಿಸುವ ಕುರಿತಂತೆ ಹೇಳಿದ್ದರು.ಈ ಒಂದು ಸೂಚನೆಯ ಸಂದೇಶದ ಬೆನ್ನಲ್ಲೇ ಹಳೇಹುಬ್ಬಳ್ಳಿಯಲ್ಲಿ ಅಲಟ್೯ ಆದ ಪಿ ಆಯ್ ಸುರೇಶ ಯಳ್ಳೂರ ಕಳೆದ ನಾಲ್ಕು ದಿನಗಳಿಂದ ಪ್ರತಿ ದಿನ ಸಾಯಂಕಾಲ ಪುಟ್ ಪೆಟ್ರೋಲಿಂಗ್ ಆರಂಭಿಸಿದ್ದಾರೆ.
ಹಳೇಹುಬ್ಬಳ್ಳಿಯಲ್ಲಿ ಪಿಆಯ್ ಅವರಿಗೆ ಸಾಥ್ ನೀಡಿರುವ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.ನಗರದಲ್ಲಿ ಅನವಶ್ಯಕವಾಗಿ ಗುಂಪು ಸೇರುವವರಿಗೆ ವಾರ್ನಿಂಗ್ ಮಾಡುವ ಮೂಲಕ ಬಿಸಿ ಮುಟ್ಟಿಸುವ ಜೊತೆಗೆ ಗಲ್ಲಿ ಗಲ್ಲಿಗೆ ಹೋಗಿ ಜನರ ಸಮಸ್ಯೆಗಳನ್ನು ಕೇಳುವ ಮೂಲಕ ಸಾದ್ಯವಾದರೆ ಸ್ಥಳದಲ್ಲಿಯೇ ಬಗೆಹಿರಿಸುವ ಕೆಲಸ ಪೋಲೀಸರಿಂದ ಆರಂಭವಾಗಿದೆ.
ಹಳೇಹುಬ್ಬಳ್ಳಿಯಲ್ಲಿ ಮನೆ ಬಾಗಿಲಿಗೆ ಪೋಲೀಸಿಂಗ್ ವ್ಯವಸ್ಥೆಗೆ ಜನ ಪುಲ್ ಖುಷ್ ಆಗಿದ್ದಾರೆ ಅಲ್ಲದೇ ಹಳೇಹುಬ್ಬಳ್ಳಿ ಪೋಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.