ರಜತ್ ಸಂಭ್ರಮಕ್ಕೆ ವೇದಿಕೆ ಸಜ್ಜು, ಅಂತಿಮ ಸಿದ್ಧತೆ ವೀಕ್ಷಿಸಿದ ರಜತ್ ಉಳ್ಳಾಗಡ್ಡಿಮಠ.

Share to all

ರಜತ್ ಸಂಭ್ರಮಕ್ಕೆ ವೇದಿಕೆ ಸಜ್ಜು, ಅಂತಿಮ ಸಿದ್ಧತೆ ವೀಕ್ಷಿಸಿದ ರಜತ್ ಉಳ್ಳಾಗಡ್ಡಿಮಠ.

ಹುಬ್ಬಳ್ಳಿ: ಇಂದು ಅದ್ದೂರಿಯಾಗಿ ನಡೆಯಲಿರುವ ರಜತ್ ಸಂಭ್ರಮ ಕಾರ್ಯಕ್ರಮದ ವೇದಿಕೆ ಸಜ್ಜಾಗಿದ್ದು ಸಿದ್ಧತೆಯನ್ನು ಖುದ್ದು ರಜತ್ ಉಳ್ಳಾಗಡ್ಡಿಮಠ ತಮ್ಮ ಸಂಗಡಿಗರೊಂದಿಗೆ ವೀಕ್ಷಣೆ ಮಾಡಿದರು,ಅಲ್ಲದೆ ಸೂಕ್ತ ಸಲಹೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಟ್ ನಟ ಡಾಲಿ ಧನಂಜಯ,ಹಾಸ್ಯ ಕಲಾವಿದ ಪ್ರಾಣೇಶ್ ಹಾಗೂ ತಂಡದ ಸದಸ್ಯರು ಹಾಗೂ 45ಕ್ಕು ಹೆಚ್ಚು ಮಠಾಧೀಶರು ಭಾಗವಹಿಸಲಿದ್ದು.ಅಲ್ಲದೆ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಸಂತೋಷ್ ಲಾಡ್ ಕೂಡ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಇನ್ನು ಕಾರ್ಯಕ್ರಮಕ್ಕೆ ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಇಂದು ಸಂಜೆ 5 ಗಂಟೆಗೆ ಶುರುವಾಗಲಿದೆ ಎಂದು ಮಾಹಿತಿಯನ್ನು ರಜತ್ ಉಳ್ಳಾಗಡ್ಡಿಮಠ ನೀಡಿದ್ದಾರೆ

ಇನ್ನು ಭದ್ರತೆ ದೃಷ್ಟಿಯಿಂದ ಇಬ್ಬರು ಎಸಿಪಿ ,ನಾಲ್ವರು ಇನ್ಸಪೆಕ್ಟರ್ ಸೇರಿದಂತೆ 200 ಜನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ.ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು .ಚಾನಕ್ ಪುರಿ ಮೈದಾನ,ವಲಯ ಕಚೇರಿ 9 ರ ಮೈದಾನ ಹಾಗೂ ಭಾರತ ಮಿಲ್ ಮೈದಾನಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು.ಬದಲಾವಣೆಗಳು ಇದ್ದಲ್ಲಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author