ಧಾರವಾಡ ಸುತ್ತ ಮುತ್ತ ಚಿರತೆ ಹಾವಳಿ.ಡಂಗುರ ಸಾರಿದ ಅರಣ್ಯ ಇಲಾಖೆ.ಜನ ಎಚ್ಚರದಿಂದ ಇರಲು ಸೂಚನೆ.
ಧಾರವಾಡ:-ಧಾರವಾಡದ ಸುತ್ತಮುತ್ತ ಚಿರತೆ ಹಾವಳಿ ಆರಂಭವಾಗಿದೆ.
ಧಾರವಾಡ ತಾಲೂಕಿನ ಗುಳೇದಕೊಪ್ಪ,ಮದಿಕೊಪ್ಪ, ಹಳೇ ತೆಗೂರು ಗ್ರಾಮಗಳ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು.ಚಿರತೆ ಓಡಾಡುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ
.
ಹೊಲದಲ್ಲಿ ಮೂರು ಚಿರತೆಗಳು ಮಲಗಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.ಗುಳೇದಕೊಪ್ಪ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮದಲ್ಲಿ ಡಂಗುರ ಸಾರಿ ಎಚ್ಚರಿಕೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ್ದಾರೆ.