ಪ್ಲಾಸ್ಟಿಕ್ ಮುಕ್ತ ಹುಬ್ಬಳ್ಳಿಗೆ ಚಾಲನೆ.ಕರ್ನಾಟಕ ರಕ್ಷಣಾ ವೇದಿಕೆ,ಪ್ರವೀಣ ಶೆಟ್ಟಿ ಬಣ ಶಪಥ.ನಿಷೇಧಿತ ಪ್ಲಾಸ್ಟಿಕ್ ನಿಲ್ಲೋವರೆಗೂ ಹೋರಾಟ.

Share to all

ಪ್ಲಾಸ್ಟಿಕ್ ಮುಕ್ತ ಹುಬ್ಬಳ್ಳಿಗೆ ಚಾಲನೆ.ಕರ್ನಾಟಕ ರಕ್ಷಣಾ ವೇದಿಕೆ,ಪ್ರವೀಣ ಶೆಟ್ಟಿ ಬಣ ಶಪಥ.ನಿಷೇಧಿತ ಪ್ಲಾಸ್ಟಿಕ್ ನಿಲ್ಲೋವರೆಗೂ ಹೋರಾಟ.

ಹುಬ್ಬಳ್ಳಿ:- ಚೋಟಾ ಮುಂಬೈ ಖ್ಯಾತಿಯ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ದಂಧೆ ನಿರಂತರವಾಗಿ ನಡೆಯುತ್ತಿದೆ.ನಿಷೇಧಿತ ಪ್ಲಾಸ್ಟಿಕ್ ಬಂದ್ ಮಾಡಲು ಹೋರಾಟ ನಡೆಸಿದ ಹೋರಾಟಗಾರರ ಮೇಲೆ ಕೇಸ್ ದಾಖಲಿಸಿ ಹೆದರಿಸುವ ಕೆಲಸವೂ ನಡೀತಾ ಇದೆ.

ನಿಷೇಧಿತ ಪ್ಲಾಸ್ಟಿಕ್ ನಿಯಂತ್ರಿಸಬೇಕಾದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು ದೂರು ಬಂದರೆ ಮಾತ್ರ ನೆಪ ಮಾತ್ರಕ್ಕೆ ಭೇಟಿ ನೀಡಿ ಪ್ರಸಾದ ಪಡೆದು ಸುಮ್ಮನಾಗುತ್ತಾರೆ.

ಆ ಹಿನ್ನೆಲೆಯಲ್ಲಿ ಈಗ ಕರ್ನಾಟಕ ರಕ್ಷಣಾ ವೇದಿಕೆ.(ಪ್ರವೀಣ ಶೆಟ್ಟಿ ಬಣ) ನಿಷೇಧಿತ ಪ್ಲಾಸ್ಟಿಕ್ ಬಂದ್ ಮಾಡಲು ಟೊಂಕ ಕಟ್ಟಿ ನಿಂತಿದೆ.ಈ ಹಿಂದೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈಗ ಮತ್ತೊಂದು ಸುತ್ತಿನ ಹೋರಾಟಕ್ಕೆ ರಕ್ಷಣಾ ವೇದಿಕೆ ಸಜ್ಜಾಗಿದೆ.

ಈಗಾಗಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ,ಪೋಲೀಸ ಇಲಾಖೆಗೆ ಖುದ್ದಾಗಿ ಮನವಿ ಸಲ್ಲಿಸಿ ನಿಷೇಧಿತ ಪ್ಲಾಸ್ಟಿಕ್ ಅನ್ನು ಬಂದ್ ಮಾಡಿ,ನಿಮ್ಮ ಜಿತೆಗೆ ನಮ್ಮ ಅಭಿಯಾನವೂ ಇರುತ್ತೇ ಅಂತಾ ಮನವಿ ನೀಡಿದೆ.

ನಿಷೇಧಿತ ಪ್ಲಾಸ್ಟಿಕ್ ಗೋದಾಮುಗಳಿಗೆ ಬೀಗ ಹಾಕುವವರೆಗೂ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲಾ ಎಂದು ರಕ್ಷಣಾ ವೇದಿಕೆಯ ಮಂಜುನಾಥ ಲೂತಿಮಠ ಎಚ್ಚರಿಕೆ ಕೊಟ್ಟಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author