ರಜತ್ ತಂದೆ‌ ಕಳೆದುಕೊಂಡ ಅನಾಥ ಮಗ ಎಂದು ಭಾವುಕರಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ.ರಜತ ಶೆಟ್ಟರಗಾಗಿ ಟಿಕೆಟ್ ತ್ಯಾಗ ಮಾಡಿದ್ರು.ಈಗ ಮತ್ತೆ ಕನಸು ಕಂಡಿದ್ದಾರೆ ಎಂದ ಸಚಿವೆ.

Share to all

ರಜತ್ ತಂದೆ‌ ಕಳೆದುಕೊಂಡ ಅನಾಥ ಮಗ ಎಂದು ಭಾವುಕರಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ.ರಜತ ಶೆಟ್ಟರಗಾಗಿ ಟಿಕೆಟ್ ತ್ಯಾಗ ಮಾಡಿದ್ರು.ಈಗ ಮತ್ತೆ ಕನಸು ಕಂಡಿದ್ದಾರೆ ಎಂದ ಸಚಿವೆ.

ಹುಬ್ಬಳ್ಳಿ:- ರಜತ ತಂದೆಯನ್ನು ಕಳೆದುಕೊಂಡ ಅನಾಥ ಮಗ.ಅವನ ಗೆಳೆಯರ ಬಳಗಕ್ಕೆ ನಾನು ಮನಸೋತಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಭಾವುಕರಾದ ಘಟನೆ ಹುಬ್ಬಳ್ಳಿಯಲ್ಲಿ ನಡೆಯಿತು.

ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ರಜತ ಸಂಬ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇವತ್ತು ಅಳಿಯನ ಜನ್ಮದಿನ.ಆದ್ರೆ ಕಾಕತಾಳಿಯನೋ ಏನೋ ಇವತ್ತು ನನ್ನ ಜನ್ಮ ದಿನಾಚರಣೆ ಇದೆ.

ಬೆಂಗಳೂರಿನಲ್ಲಿ‌ ಬಜೆಟ್ ಅಧಿವೇಶನ ಇದೆ.ಆದ್ರೆ ಅಳಿಯನಿಗಾಗಿ ಇಲ್ಲಿಗೆ ಬಂದಿದ್ದೇನೆ. ರಜತ್ ಲಕ್ಷ್ಮೀ ಹೆಬ್ಬಾಳ್ಕರ ಅಳಿಯ ಅಂತಾ ಹೇಳತಾರೆ.ಹಾಗಾಗಿ ರಾಜಕಾರಣದಲ್ಲಿ ಇದ್ದಾರೆ ಎಂದು ಬಹುತೇಕರು ಹೇಳ್ತಾರೆ.ಆದ್ರೆ ರಜತ್ ನನ್ನ ಮಗಳ ಮದುವೆ ಆಗುವುದಕ್ಕಿಂತ ಮೊದಲೇ ರಾಜಕಾರಣದಲ್ಲಿ ಇದ್ದವರು.ಬಹುಶಃ ಅವನು ನನ್ನ ಅಳಿಯಾ ಆಗಿರೋದ್ರಿಂದ ರಾಜಕಾರಣದಲ್ಲಿ ಹಿಂದೆ ಇದ್ದಾರೆ.

ರಜತ್ ಶೆಟ್ಟರಗಾಗಿ ಟಿಕೆಟ್ ತ್ಯಾಗ ಮಾಡಿದವರು.ಇವತ್ತು ಮತ್ತೆ ಕನಸು ಕಂಡಿದ್ದಾನೆ.ಆದ್ರೆ ಹೈಕಮಾಂಡ್ ತೀರ್ಮಾನವೇ ಅಂತಿಮ.ಪರೋಕ್ಷವಾಗಿ ರಜತ್ ಲೋಕಸಭೆ ಅಬ್ಯೆರ್ಥಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಮುನ್ಸೂಚನೆ ನೀಡಿದರು.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author