ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ. ಮೂವರನ್ನ ಹೊರತುಪಡಿಸಿ ಉಳಿದ ಎಲ್ಲರಿಗೂ ಜಾಮೀನು ಮಂಜೂರು.

Share to all

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ.
ಮೂವರನ್ನ ಹೊರತುಪಡಿಸಿ ಉಳಿದ ಎಲ್ಲರಿಗೂ ಜಾಮೀನು ಮಂಜೂರು.

ಹುಬ್ಬಳ್ಳಿ:-ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಮೂವರನ್ಬು ಹೊರತು ಪಡಿಸಿ ಉಳಿದ ಎಲ್ಲರಿಗೂ ಜಾಮೀನು ಮಂಜೂರಾಗಿದೆ.ಬೆಂಗಳೂರಿನ ಹೈಕೋರ್ಟ್‌ನಿಂದ ಇಂದು 105 ಜನರಿಗೆ ಜಾಮೀನು ಮಂಜೂರಾಗಿದೆ.

ಕಳೆದ ಒಂದು ವರ್ಷ ಹತ್ತು ತಿಂಗಳ ಹಿಂದೆ ಹಳೆಹುಬ್ಬಳ್ಳಿಯಲ್ಲಿ ವಾಟ್ಸಪ್ ಸ್ಟೇಟಸ್ ವಿಚಾರವಾಗಿ ಎರಡು ಕೋಮುಗಳ ನಡುವೆ ಗಲಾಟೆಯಾಗಿತ್ತು.
ಗಲಾಟೆ ವೇಳೆ ಕೆಲವರು ಪೊಲೀಸ್ ಠಾಣೆಗೆ ಕಲ್ಲು ಎಸೆದಿದ್ದರು.ಅಲ್ಲದೇ ಪೊಲೀಸ್ ಠಾಣೆ ಮುಂಭಾಗದಲ್ಲಿ ಬಂದು ಗಲಾಟೆ ಮಾಡಿ ಪೊಲೀಸ್ ವಾಹನಗಳನ್ನ ಜಖಂ ಮಾಡಿದ್ರು.

ಎಪ್ರೀಲ್ 16-2022 ರಂದು
ಡಿಜೆ ಹಳ್ಳಿ ಕೆಜಿ ಹಳ್ಳಿ ಮಾದರಿಯಲ್ಲಿ ಹಳೇಹುಬ್ಬಳ್ಳಿಯಲ್ಲಿ ಗಲಾಟೆ ನಡೆದು ಒಟ್ಟು 152 ಜನರ ಬಂಧನವಾಗಿತ್ತು.ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 12 ಪ್ರಕರಣಗಳು ದಾಖಲಾಗಿದ್ವು.
ಗಲಾಟೆಯಲ್ಲಿ 10 ಕ್ಕೂ ಹೆಚ್ಚು ಪೊಲೀಸ್ ವಾಹನ ಜಖಂ ಆಗಿದ್ದವು.ಪೊಲೀಸ್ ಇನ್ಸಪೆಕ್ಟರ್ ಸೇರಿ ಏಳು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಗಲಭೆಕೋರರು.

ಈ ಹಿಂದೆ 152 ಜನರಲ್ಲಿ ಕೆಲ ಬಾಲಾಪರಾಧಿಗಳು ಸೇರಿ 10 ಕ್ಕೂ ಹೆಚ್ಚು ಜನರಿಗೆ ಜಾಮೀನು ಮಂಜೂರ ಆಗಿತ್ತು.ನಂತರ ಅಂದ್ರೆ ಕಳೆದ ಎರಡೂ ‌ತಿಂಗಳ ಹಿಂದೆ 35 ಜನರಿಗೆ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಮಂಜೂರಾಗಿತ್ತು.ಈಗ ಮೂವರನ್ನ ಹೊರತುಪಡಿಸಿ ಉಳಿದವರೆಲ್ಲರಿಗೂ ಜಾಮೀನು ಮಂಜೂರಾಗಿದೆ.

ಇದೇ 5 ರಂದು ಅಂಜುಮನ್ ಸಂಸ್ಥೆಯ ಚುನಾವಣೆ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಮಕ್ಕಳಿಗಾಗಿ ಕಣ್ಣೀರು ಹಾಕಿದ್ದ ಕುಟುಂಬಸ್ಥರು.ನಮ್ಮ‌ ಮಕ್ಕಳನ್ನ ಜೈಲಿನಿಂದ ಹೊರತನ್ನಿ ನಂತ್ರ ನೀವು ಚುನಾವಣೆ ಮಾಡಿ,ನಮ್ಮ ಮಕ್ಕಳು ಜೈಲಿನಲ್ಲಿದ್ದಾರೆ, ಈ ಸಮಯದಲ್ಲಿ ಚುನಾವಣೆ ಬೇಡ ಎಂದು ಮುಸ್ಲಿಂ ಸಮುದಾಯದ ಮುಖಂಡರನ್ನ ಪೋಷಕರು ತರಾಟೆಗೆ ತೆಗೆದುಕೊಂಡಿದ್ದರು.ಇಂದು 105 ಜನ ಯುವಕರಿಗೆ ಜೈಲಿನಿಂದ ಮುಕ್ತಿಯಾಗಿದ್ದು
ಇನ್ನೂ ಮೂವರ ಪ್ರಕರಣ ಸುಪ್ರೀಂ ಕೋರ್ಟ್ ವಿಚಾರಣೆ ಹಂತದಲ್ಲಿ ಜಾಮೀನು ವಿಳಂಬವಾಗಿದೆ

ಉದಯ ವಾರ್ತೆ.


Share to all

You May Also Like

More From Author