ಹುಬ್ಬಳ್ಳಿ ಕೇಶ್ವಾಪುರ ಪೋಲೀಸರ ಕಾರ್ಯಾಚರಣೆ.ಡಾವಣಗೇರಿ ಮೂಲದ ಇಬ್ಬರು ಸರಗಳ್ಳರ ಬಂಧನ.
ಹುಬ್ಬಳ್ಳಿ:- ಹುಬ್ಬಳ್ಳಿ ಕೇಶ್ವಾಪುರ ಪೋಲೀಸ ಠಾಣೆ ವ್ಯಾಪ್ತಿಯಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ರೇಲ್ವೇ ಗ್ರೌಂಡ ಹತ್ತಿರ ಮಹಿಳೆಯೊಬ್ಬಳ ಕೊರಳಲ್ಲಿದ್ದ ಮಂಗಲ ಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದ ಡಾವಣಗೇರಿ ಮೂಲದ ಇಬ್ಬರನ್ನು ಪೋಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 32 ಗ್ರಾಂ ಬಂಗಾರ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.ಬಂಧಿತರನ್ನು ಡಾವಣಗೇರಿಯಲ್ಲಿ ಬಂಧಿಸಿ.ಡಾವಣಗೇರಿ ಮತ್ತು ಮೈಸೂರಿಗೆ ತೆರಳಿದ ಪೋಲೀಸರು ಬಂಗಾರ ವಶಪಡಿಸಿಕೊಂಡಿದ್ದಾರೆ.
ಮಣಿಪಾಲ,ಉಡುಪಿ,ಶಿವಮೊಗ್ಗರಾಣೆಬೆನ್ನೂರುಗಳಲ್ಲಿ ಆರೋಪಿತರ ಮೇಲೆ ಸರಗಳ್ಳತನ, ಮೋಟಾರ ಬೈಕ್ ಕಳ್ಳತನ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದು ಕಳ್ಳತನ ಮುಂದುವರೆಸಿದ ಕಿಲಾಡಿ ಕಳ್ಳರನ್ನ ಹುಬ್ಬಳ್ಳಿ ಪೋಲೀಸರು ಹೆಡಮುರಿ ಕಟ್ಟಿ ಜೈಲಿಗೆ ಅಟ್ಟಿದ್ದಾರೆ.