ನವಲಗುಂದ ತಾಲೂಕು ಪ್ರವೇಶಿಸಿದ ಸಂವಿಧಾನ ಜಾಗೃತಿ ಜಾಥಾ.ಮಹಾನ ಪುರಷರ ಭಾವಚಿತ್ರಗಳ ಮೆರವಣಿಗೆ.

Share to all

ನವಲಗುಂದ ತಾಲೂಕು ಪ್ರವೇಶಿಸಿದ ಸಂವಿಧಾನ ಜಾಗೃತಿ ಜಾಥಾ.ಮಹಾನ ಪುರಷರ ಭಾವಚಿತ್ರಗಳ ಮೆರವಣಿಗೆ.

ಹುಬ್ಬಳ್ಳಿ:- ಸಂವಿಧಾನ ಜಾಗೃತಿ ಜಾಥಾವು ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದಿಂದ ನವಲಗುಂದ ತಾಲೂಕಿನ ನಾಯಕನೂರು ಗ್ರಾಮವನ್ನು ಪ್ರವೇಶಿಸಿತು. ಆ ಮೂಲಕ ನವಲಗುಂದ ತಾಲೂಕಿನಲ್ಲಿ ಫೆ‌.18 ರಿಂದ 21 ರವರೆಗೆ ಜಾಥಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಲಿದೆ.

ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಡಾ.ಬಿ‌.ಆರ್.ಅಂಬೇಡ್ಕರ್, ಬಸವಣ್ಣನವರು, ಮಹರ್ಷಿ ವಾಲ್ಮೀಕಿ ಸೇರಿದಂತೆ ವಿವಿಧ ಮಹಾನ ಪುರುಷರ ಭಾವಚಿತ್ರಗಳ ಮೆರವಣಿಗೆ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ನಡೆಯಿತು. ವಿದ್ಯಾರ್ಥಿಗಳು ವೇಷಭೂಷಣ ಧರಿಸಿದ್ದರು. ಈ ಸಂದರ್ಭಗಳಲ್ಲಿ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿ ಸಾರ್ವಜನಿಕರಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ‌ ನಿರ್ದೇಶಕಿಯರಾದ ಕಫೀಲಾ ಏಲೂವಗಿ, ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮುಖಂಡರು ಹಾಗೂ ಆಶಾ ಕಾರ್ಯಕರ್ತೆಯರು , ಗ್ರಾಮಸ್ಥರು ಪಾಲ್ಗೊಂಡಿದ್ದರು.

ಇಂದು ನಾಯಕನೂರ, ತಡಹಾಳ, ಗುಡಿ ಸಾಗರ, ಫೆಬ್ರವರಿ 19 ರಂದು ನವಲಗುಂದ, ಬೆಳವಟಗಿ, ಅಳಗವಾಡಿ, ಹಾಲಕುಸುಗಲ್, ಹೆಬ್ಬಾಳ, ಜಾವೂರ, ಫೆಬ್ರವರಿ 20 ರಂದು ಗುಮ್ಮಗೋಳ, ಶಿರೂರ, ಮೊರಬ, ಶಿರಕೋಳ, ತಿರ್ಲಾಪುರ, ಫೆ.21 ರಂದು ಯಮನೂರು, ಕಾಲವಾಡ, ಬೆಳಹಾರ ಮೂಲಕ ಹುಬ್ಬಳ್ಳಿ ತಾಲೂಕಿಗೆ ಪ್ರವೇಶಿಸಲಿದೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author