ಮಗನ ಶವದ ಮುಂದೆ ಸಿದ್ದರಾಮಯ್ಯ ನೀಡುವ ಎರಡು ಸಾವಿರ ನೆನೆದ ತಾಯಿ.ನಿನಗ ದವಾಖಾನೆಗೆ ಗ್ರಹಲಕ್ಷ್ಮೀ ಯೋಜನೆ ಹಣ ಕೂಡಿಟ್ಟಿದ್ದೇ ಎಂದು ಕಣ್ಣೀರು.
ಬೆಳಗಾವಿ:-ಅನಾರೋಗ್ಯದಿಂದ ಮಗನ ಕಳೆದುಕೊಂಡ ತಾಯಿಯೊಬ್ಬಳ್ಳು ಮಗನ ಶವದ ಮುಂದೆ ಸಿದ್ಧರಾಮಯ್ಯ ಸರಕಾರ ನೀಡುವ ಎರಡು ಸಾವಿರ ನೆನೆದು ಕಣ್ಣೀರು ಹಾಕಿದ ಘಟನೆ ಬೆಳಗಾವಿಯಲ್ಲಿನಡೆದಿದೆ.
ಸವದತ್ತಿ ತಾಲೂಕಿನ ಮರಕಂಬಿ ಗ್ರಾಮದ ವಿಶ್ವನಾಥ ಎಂಬಾತ ಅನಾರೋಗ್ಯದಿಂದ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದನು.ನಂತರ ತಾಯಿ ನೀಲವ್ವ ಮಗನ ಶವದ ಮುಂದೆ ಕಣ್ಣೀರಿಡುತ್ತಾ ನನ್ನ ಬಳಿ ಕೊಟ್ಟಿರುವ ಎರಡು ಸಾವಿರ ರೂಪಾಯಿ ಕೂಡಿಟ್ಟಿದ್ದೇ ಕೇಳಿದ್ದರೆ ಕೊಡತಿದ್ದೇ ಎಂದು ಕಣ್ಣೀರ ಹಾಕಿದ್ದಾಳೆ.
ಮಗನ ಶವ ಸಂಸ್ಕಾರ ಮುಗಿದ ನಂತರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಕೂಡ ಈ ತಾಯಿಗೆ ಒಂದು ವರ್ಷಕ್ಕೆ ಜಮೆ ಆಗುವ ಗ್ರಹ ಲಕ್ಷ್ಮೀ ಯೋಜನೆಯ ಹಣದ ನೆರವಿನ ಹಸ್ತ ಚಾಚಿದ್ದಾರೆ.