ಅಲ್ತಾಫ್ ಹಳ್ಳೂರ ಮತ್ತೊಮ್ಮೆ ಆಗ್ತಾರಾ ಕಿಂಗ್ ಮೇಕರ್. ಅಂಜುಮನ್ ಚುನಾವಣೆ ಭರ್ಜರಿ ರೆಸ್ಪಾನ್ಸ್.

Share to all

ಅಲ್ತಾಫ್ ಹಳ್ಳೂರ ಮತ್ತೊಮ್ಮೆ ಆಗ್ತಾರಾ ಕಿಂಗ್ ಮೇಕರ್. ಅಂಜುಮನ್ ಚುನಾವಣೆ ಭರ್ಜರಿ ರೆಸ್ಪಾನ್ಸ್.

ಹುಬ್ಬಳ್ಳಿ : ಬಹು ನಿರೀಕ್ಷಿತ ಹುಬ್ಬಳ್ಳಿ ಅಂಜುಮನ್ ಮತದಾನ ಪ್ರಕ್ರಿಯೆ ಇಂದು ಮುಕ್ತಾಯವಾಗಿದೆ.ಇದೀಗ ಎಲ್ಲರ ದೃಷ್ಠಿ ಪಲಿತಾಂಶದ ಮೇಲೆ ನೆಟ್ಟಿದ್ದು.ಯಾರು ವಿಜಯದ ಮಾಲ್ ಧರಿಸಲಿದ್ದಾರೆ ಎಂದು ಸಾರ್ವಜನಿಕರು ಕೌತಕದಿಂದಕಾಯುತ್ತಿದ್ದಾರೆ.

ಹೌದು ಹಾಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ತಮ್ಮೆಲ್ಲಾ ಶಕ್ತಿ ಒಗ್ಗೂಡಿಸಿ ಈ ಬಾರಿ ಎ ಎಂ ಹಿಂಡಸಗೆರಿ ಮತ್ತು ತಂಡದ ಪರವಾಗಿ ಭರ್ಜರಿ ಚುನಾವಣೆ ಪ್ರಚಾರ ನಡೆಸಿದ್ದಾರೆ.ಇದೀಗ ಇವರ ಪರಿಶ್ರಮದ ಪರಿಣಾಮ ಹಿಂಡಸಗೆರಿ ತಂಡ ಗೆಲವು ಸಾಧಿಸಲಿದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.

ಕಳೆದ ಬಾರಿ ಅಲ್ತಾಫ್ ಹಳ್ಳೂರ ಯುಸೂಫ್ ಸವಣೂರು ಪರವಾಗಿ ಪ್ರಚಾರ ನಡೆಸಿ ಅವರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು.ಇದೀಗ ಮತ್ತೊಮ್ಮೆ ಅಲ್ತಾಫ್ ಹಳ್ಳೂರ ತಮ್ಮ ಮತ ಬೇಟೆಯಿಂದ ತಾವೇ ಗೆಲ್ಲಿಸಿಕೊಂಡು ಬಂದಿದ್ದ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಹುಬ್ಬಳ್ಳಿ ಅಲ್ಪ ಸಂಖ್ಯಾತ ಸಮುದಾಯದ ಪ್ರಾಮಾಣಿಕ ನಾಯಕ ಎಂದೇ ಇವರನ್ನು ಬಣ್ಣಿಸಲಾಗಿದ್ದು.ಅಂಜುಮನ್ ಚುನಾವಣೆ ಪಲಿತಾಂಶ ಇವರ ವಯಕ್ತಿಕ ರಾಜಕೀಯ ದೆಸೆ ಕೂಡ ಬದಲಿಸಲಿದೆ ಎಂದು ಹೇಳಲಾಗುತ್ತಿದೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author