ಧಾರವಾಡ:-ಹಿತ್ತಲ ಜಾಗೆಯಲ್ಲಿ ಕಂಪೌಂಡ ಕಟ್ಟುವ ವಿಚಾರಕ್ಕೆ ಸಹೋದರ ನಡುವೆ ಗಲಾಟೆಯಲ್ಲಿ ಓರ್ವನ ಕೊಲೆ ನಡೆದು.ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ.
ಧಾರವಾಡ ತಾಲೂಕಿನ ತಲವಾಯಿ ಗ್ರಾಮದಲ್ಲಿ ಹಿತ್ತಲ ಜಾಗೆಗೆ ಸಂಬಂಧಿಸಿದಂತೆ ಅಶೋಕ.ಕಮ್ಮಾರ ಮತ್ತು ಫಕ್ಕೀರಪ್ಪ ಕಮ್ಮಾರ ಇಬ್ಬರು ಕುಟುಂಬದ ಮದ್ಯೆ ಬಡಿದಾಟ ನಡೆದು.ಆ ಬಡಿದಾಟದಲ್ಲಿ ಒಬ್ಬ ಸಾವನ್ನಪ್ಪಿದ್ದು ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ.
ಪೆಟ್ಟು ತಿಂದ ಅಶೋಕ ಕಮ್ಮಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ.ಇನ್ನೋರ್ವ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು 14 ಜನರ ಮೇಲೆ ದೂರು ದಾಖಲಾಗಿದೆ.