ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ. ಎರಡು ಕಾರುಗಳ ಮದ್ಯೆ ಡಿಕ್ಕಿ.ಮೂವರ ಸಾವು.
ಬೆಳಗಾವಿ:-ಬೆಳಗಾವಿಯಲ್ಲಿ ಎರಡು ಕಾರುಗಳ ಮದ್ಯೆ ಮುಖಾ ಮುಖಿ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ ಘಟನೆ ಜರುಗಿದೆ.
ಬೆಳಗಾವಿಯ ಯರಗಟ್ಟಿ ತಾಲೂಕಿನ ಕುರುಬಗಟ್ಟಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಒಂದು ಮಗು ಸೇರಿ ಮೂವರು ಸಾವನ್ನಪ್ಪಿದ್ದಾರೆ.
ಮೃತರನ್ನು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದ ಸತ್ಯಪ್ಪ ನಾಯ್ಕ (8) ಗೋಪಾಲ ಸತ್ಯಪ್ಪ ನಾಯ್ಕ (45) ಮತ್ತು ಧಾರವಾಡ ಮೂಲದ ಅನ್ನಪೂರ್ಣ ಬಾಳೇಶ ಶಿರೋಳ ಸಾವನ್ನಪ್ಪಿದ್ದಾರೆ.
ಮುರಗೋಡ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ತನಿಖೆ ನಡೆಸಿದ್ದಾರೆ.