ವಲಯ ಅರಣ್ಯ ಅಧಿಕಾರಿ ಹಾಗೂ ಗುತ್ತಿಗೆದಾರನ ಬೇಜಾವಾಬ್ದಾರಿ.ಆಸ್ಪತ್ರೆ ಸೇರಿದ ಇಬ್ಬರು ಅರಣ್ಯ ಸಿಬ್ಬಂದಿಗಳು.ಸಿಬ್ಬಂದಿಗಳ ರೋಧನ ಕೇಳೋರ್ಯಾರು…?
ಹಳಿಯಾಳ:-ನಸ್೯ರಿಯಲ್ಲಿ ಕಟ್ಟಲಾಗಿದ್ದ ನೀರಿನ ಟ್ಯಾಂಕ್ ಕುಸಿದು ಇಬ್ಬರು ಅರಣ್ಯ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಹಳಿಯಾಳ ಅರಣ್ಯ ವಿಭಾಗದ ಭರ್ಜಿ ವಲಯದ ಗೋಬ್ರಾಳ ನರ್ಸರಿಯಲ್ಲಿ ನಡಿದಿದೆ.
ನಿನ್ನೆ ಗೋಬ್ರಾಳ ನರ್ಸರಿಯಲ್ಲಿ ನೀರಿನ ಟ್ಯಾಂಕ ಕುಸಿದು ಬೀಟ್ ಫಾರೆಸ್ಟರ್ ಸೋಮಶೇಖರ ಹೊನ್ನಕೇರಿ ಹಾಗೂ ಫಾರೆಸ್ಟ ವಾಚರ್ ಭೀರಪ್ಪ ಗಾಯಗೊಂಡಿದ್ದು ಅದರಲ್ಲಿ ಓರ್ವ ಸಿಬ್ಬಂದಿಗೆ ಬ್ಲಡ್ ಬ್ಲೀಡಿಂಗ್ ಆಗಿ ಐಸಿಯುದಲ್ಲಿ ಇದ್ದಾನೆ ಎನ್ನಲಾಗಿದೆ.
ಹೇಳಿ ಕೇಳಿ ಅರಣ್ಯ ಅಲ್ಲಿ ಏನಮಾಡಿದರೂ ನಡೆಯುತ್ತದೆ.ಅನ್ನೋ ಅಧಿಕಾರಿಗಳಿಗೆ ದಕ್ಷ ಅಧಿಕಾರಿ ಫಾರೆಸ್ಟ್ ಸಿಂಗಂ ವಸಂತ ರೆಡ್ಡಿ ಸಾಹೇಬ್ರು ಈ ನೀರಿನ ಟ್ಯಾಂಕ್ ಪ್ರಕರಣದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಿ ಗುತ್ತಿಗೆದಾರ,ಕಾಮಗಾರಿ ಬಿಲ್ ಪಾಸಮಾಡಿದ RFO ಅಶೋಕ.ಶಿಳ್ಳೆಣ್ಣವರ.ಚೆಕ್ ಮೇಜರಮೆಂಟ್ ಮಾಡಿದ ACF ಕೆ.ಡಿ ನಾಯ್ಕ್ ಅವರ ಮೇಲೆ ಶಿಸ್ತುಕ್ರಮ ಕೈಕೊಳ್ಳತಾರಾ ಕಾದು ನೋಡಬೇಕಾಗಿದೆ.
ನರ್ಸರಿ ನೀರಿನ ಟ್ಯಾಂಕ್ ಕುಸಿತದ ದಗಲ್ ಬಾಜಿಯನ್ನ ಶೀಘ್ರದಲ್ಲಿ ಬಿಚ್ಚಿಡಲಿದೆ ಉದಯ ವಾರ್ತೆ.
!!!!ನಿರೀಕ್ಷಿಸಿ ಹಾವಿಗೆ ಹಾಲು ಕುಡಿಸಿ,ಟ್ಯಾಂಕಿಗೆ ನೀರುಣಿಸಿದ ಹಳಿಯಾಳ ವಲಯ ಅರಣ್ಯ ಅಧಿಕಾರಿಯ KDಯ ಅಸಲಿ ಕಹಾನಿಯನ್ನ ಉದಯ ವಾರ್ತೆಯಲ್ಲಿ!!!