ಬೆಂಕಿಗೆ ಆಹುತಿಯಾದ ಬೋರ್ ವೆಲ್ ಗಾಡಿ.ಲಕ್ಷಾಂತರ ರೂಪಾಯಿ ನಷ್ಟ.ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲಾ.
ಡಾವಣಗೇರಿ:-ಬೋರ್ ವೆಲ್ ಗಾಡಿಯ ಸಿಬ್ಬಂದಿಗಳು ಅಡುಗೆ ಮಾಡಿಕೊಳ್ಳುವಾಗ ಆಕಸ್ಮಿಕವಾಗಿ ಗಾಡಿಗೆ ಬೆಂಕಿ ತಗುಲಿ ಇಡೀ ಲಾರಿ ಬೆಂಕಿಗೆ ಆಹುತಿಯಾದ ಘಟನೆ ಕುಕ್ಕವಾಡ ಗ್ರಾಮದಲ್ಲಿ ನಡೆದಿದೆ.
ಡಾವಣಗೇರಿ ತಾಲೂಕಿನ ಕುಕ್ಕವಾಡ ಗ್ರಾಮದ ಧರ್ಮರಾಜ ಎನ್ನುವವರಿಗೆ ಸೇರಿದ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯುತ್ತಿದ್ದ ಬೋರ್ ವೆಲ್ಲಗೆ ಸಪೋಟ್೯ ಲಾರಿ ಕೆಳಗೆ ಅಡುಗೆ ಮಾಡುತ್ತಿದ್ದಾಗ ಕಬ್ಬಿನ ಸೊಪ್ಪಿಗೆ ಬೆಂಕಿ ತಗುಲಿ,ಅವಘಡ ಸಂಭವಿಸಿದೆ.
ಬೆಂಕಿಯ ಕೆನ್ನಾಲಿಗೆ ಬೋರ್ ವೆಲ್ ನ ಸಫೋಟ್೯ ಲಾರಿಗೆ ತಗುಲಿ ಧಗ ಧಗನೆ ಹೊತ್ತಿ ಉರಿದ ಪರಿಣಾಮ ಮಾಲಿಕನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.