ಕಾಂಗ್ರೆಸ್ ಅಂಗಳಕ್ಕೆ ಕಾಲಿಟ್ಟರಾ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್.ಹಾಗೂ ಶಿವರಾಮ್ ಹೆಬ್ಬಾರ.ಅಡ್ಡಮತದಾನದ ಮೂಲಕ ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಜೋಡೆತ್ತು.
ಬೆಂಗಳೂರ:- ಲೋಕ ಸಭಾ ಚುನಾವಣೆಗೆ ದಿನಾಂಕ ಘೋಷಣೆ ಒಂದೇ ಬಾಕಿ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಹಾಗೂ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
ಕಳೆದ ಹಲವು ದಿನಗಳಿಂದ ಬಿಜೆಪಿ ಬಗ್ಗೆ ಅಸಮಾಧಾನ ಹೊರಹಾಕುತ್ತಾ ಬಂದಿದ್ದ ಶಾಸಕ ಎಸ್ ಟಿ. ಸೋಮಶೇಖರ ಇಂದು ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವ ಮೂಲಕ ಬಿಜೆಪಿಗೆ ಬಿಗ್ ಶಾಕ್ ನೀಡಿದ್ದಾರೆ.
ನಿನ್ಬೆ ರಾತ್ರಿ ಕಾಂಗ್ರೆಸ್ ಶಾಸಕರು ತಂಗಿದ್ದ ಹಿಲ್ಟನ್ ಹೊಟೆಲ್ ಗೆ ಶಾಸಕ ಶಿವರಾಮ ಹೆಬ್ಬಾರ ಜೊತೆಯಾಗಿ ಎಸ್.ಟಿ ಸೋಮಶೇಖರ ಭೇಟಿ ನೀಡಿದ್ದರು ಎನ್ನಲಾಗಿದೆ. ಈ ವೇಳೆ ಕಾಂಗ್ರೆಸ್ ಶಾಸಕರು ಹಾಗೂ ಉಪ ಮುಖ್ಯಂತ್ರಿ ಡಿಕೆಸಿ ಜೊತೆ ಮಹತ್ವದ ಚರ್ಚೆ ನಡೆದಿತ್ತು ಎಂದು ಮಾಹಿತಿ ಉದಯ ನ್ಯೂಸ್ ಗೆ ಲಬ್ಯವಾಗಿದೆ.
ಇಂದು ಮತದಾನದ ವೇಳೆ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಸೋಮಶೇಖರ ಗೆ ವಿಪ್ ನೀಡಲು ಮುಂದಾದರೂ ಎಸ್ ಟಿ.ಸೋಮಶೇಖರ ಕೇಳಿಸಿಕೊಳ್ಳದೇ ಮತದಾನಕ್ಕೆ ಮುನ್ನಡೆದರು.
ಮತದಾನದ ನಂತರ ಆತ್ಮಸಾಕ್ಷಿ ಪರ ಮತದಾನ ಮಾಡಿದ್ದೇನೆ ಎಂದು ಸೋಮಶೇಖರ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ ಮತದಾನ ಪೂರ್ವ ಶಾಸಕರ ಸಭೆ ಕರೆದರೂ ಎಸ್ ಟಿ ಸೋಮಶೇಖರ ಸಭೆಗೆ ಹಾಜರಾಗಿರಲಿಲ್ಲಾ.ಲೋಕಸಭೆ ಚುನಾವಣೆ ತಲೆ ಮೇಲಿರುವಾಗ ಈ ಕ್ಷಿಪ್ರಗತಿಯ ರಾಜಕೀಯ ಬಿರುಗಾಳಿ ಬಿಜೆಪಿಗೆ ಬಿಗ್ ಶಾಕ್ ನೀಡಿದೆ.