ನಿಷೇಧಿತ ಪ್ಲಾಸ್ಟಿಕ್ ಮುಕ್ತ ಹುಬ್ಬಳ್ಳಿ-ಧಾರವಾಡ ಕರವೇ ಅಭಿಯಾನ ಭಾಗ-1 ಸ್ಟಾಟ್೯. ಅಳಗುಂಡಗಿ ಅಂಗಡಿ ಮೇಲೆ ದಾಳಿ.
ಹುಬ್ಬಳ್ಳಿ:-ಹುಬ್ಬಳ-ಧಾರವಾಡ ಅವಳಿ ನಗರಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟಕ್ಕೆ ಕಡಿವಾಣ ಬಿದ್ದಿಲ್ಲ.ಎಂದು ಕಳೆದ ಕೆಲ ದಿನಗಳ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು, ಪೊಲೀಸ್ ಅಧಿಕಾರಿಗಳಿಗೆ ಮೇಲಿಂದ ಮೇಲೆ ದೂರು ನೀಡಿದ್ದರು.
ಆದರೂ ಯಾವುದೇ ಪ್ರಯೋಜನವಾಗಿಲ್ಲ. ಅಕ್ರಮ ಪ್ಲಾಸ್ಟಿಕ್ ಮಾರಾಟಗಾರರು ಯಾವುದೇ ಭಯವಿಲ್ಲದೆ ಹೊರ ರಾಜ್ಯಗಳಿಂದ ಬ್ಯಾನ್‌ಡ ಪ್ಲಾಸ್ಟಿಕ್ ತರಿಸಿ ಹುಬ್ಬಳ್ಳಿ – ಧಾರವಾಡ ಮಾತ್ರವಲ್ಲ ಸುತ್ತಮುತ್ತಲಿನ ಜಿಲ್ಲೆಗಳಿಗೆ ಪೂರೈಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಆದೇಶದ ನಡುವೆಯೂ ಅಕ್ರಮ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಅಕ್ರಮ ದಂಧೆ ನಡೆಸುವ ಗೋದಾಮುಗಳಿಗೆ ಸಂಪೂರ್ಣ ಬೀಗ ಜಡಿಯುವವರೆಗೂ ಕರವೇ ಸುಮ್ಮನೆ ಕೂರಲ್ಲ ಅಂತಾ ಸಂದೇಶ ರವಾನೆ ಮಾಡಿತ್ತು.
ಆ ನಿಟ್ಟಿನಲ್ಲಿ ಇಂದು ಹುಬ್ಬಳ್ಳಿಯ ಘಂಟಿಕೇರಿ ಪೋಲೀಸ ಠಾಣೆಯ ಎದುರಿಗೆ ಇರುವ ಅಳಗುಂಡಗಿ ಪ್ಲಾಸ್ಟಿಕ್ ಅಂಗಡಿಗೆ ಪಾಲಿಕೆ ಹಾಗೂ ರಕ್ಷಣಾ ವೇದಿಕೆ ಜಂಟಿಯಾಗಿ ದಾಳಿ ನಡೆಸಿ.ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಿದೆ.
ಎಲ್ಲೆಲ್ಲಿ ನಿಷೇಧಿತ ಪ್ಲಾಸ್ಟಿಕ್ ಸಂಗ್ರಹಿಸಲಾಗುತ್ತೋ, ಎಲ್ಲೆಲ್ಲಿ ಅನಧಿಕೃತವಾಗಿ ಮಾರಾಟ ನಡೆಯುತ್ತಿದೆಯೋ ಅಲ್ಲಿ ನಮ್ಮ ಹೋರಾಟ ಶತಃಸಿದ್ಧ. ನಿಷೇಧಿತ ಪ್ಲಾಸ್ಟಿಕ್‌ನಿಂದ ಹುಬ್ಬಳ್ಳಿ- ಧಾರವಾಡಕ್ಕೆ ಮುಕ್ತಿ ನೀಡುವ ಅಭಿಯಾನಕ್ಕೆ ಕರವೇ ಮತ್ತೊಮ್ಮೆ ಚಾಲನೆ ಕೊಡುತ್ತಿದೆ. ಈ ಪರಿಸರ ಕಾಳಜಿಯ ಹೋರಾಟಕ್ಕೆ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ ಎಂದು ಮಂಜುನಾಥ ಲೂತಿಮಠ ಹೇಳಿದ್ದಾರೆ.