ಮಗು ಅಳುತ್ತೆ ಅಂತಾ ಗೋಡೆಗೆ ಎಸೆದ ಪ್ರಕರಣ.ಮಗು ಸಾವು.ಗಂಡನಿಗೆ ಶಿಕ್ಷೆಗೆ ಆಗ್ರಹ.
ಹುಬ್ಬಳ್ಳಿ:-ಮಗು ಅಳೋದ್ರಿಂದ ನಿದ್ರೆ ಆಗತಿಲ್ಲಾ ಅಂತಾ ತಂದೆಯೇ ಒಂದು ವರ್ಷದ ಮಗುವನ್ನೇ ಗೋಡೆಗೆ ಎಸೆದ ಪ್ರಕರಣದಲ್ಲಿ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.
ಧಾರವಾಡ ತಾಲೂಕ ಯಾದವಾಡ ಗ್ರಾಮದ ಶಂಬುಲಿಂಗಯ್ಯ ಶಾಪುರಮಠ ಎಂಬಾತ ರಾತ್ರಿ ಮಲಗುವ ಸಂದರ್ಭದಲ್ಲಿ ಮಗು ಅಳುತ್ತೇ ಅಂತಾ ಗೋಡೆಗೆ ಎಸೆದಿದ್ದನು.ಚಿಕಿತ್ಸೆಗಾಗಿ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿಸಿತ್ತು.ಚಿಕಿತ್ಸೆ ಫಲಕಾರಿಯಾಗದೇ ಒಂದು ವರ್ಷದ ಕಂದಮ್ಮ ಸಾವನ್ನಪ್ಪಿದೆ.
ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂಧನ ಮುಗಿಲು ಮುಟ್ಟಿದ್ದು ಪಾಪಿ ಗಂಡನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮಗುವಿನ ತಾಯಿ ಸವಿತಾ ಆಗ್ರಹಿಸಿದ್ದಾಳೆ.