ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಡಾ ಮಹೇಶ್ ನಾಲವಾಡ. ಸಾಮಾಜಿಕ ಜಾಲ ತಾಣಗಳಲ್ಲಿ ಜೋರಾಗುತ್ತಿದೆ ಟಿಕೇಟ್ ಗಾಗಿ ಕೂಗು.
ಗದಗ ಹಾವೇರಿ :-ವೃತ್ತಿಯಲ್ಲಿ ವೈಧ್ಯರಾಗಿ ಸಾರ್ವಜನಿಕರ ಸೇವೆಯನ್ನು ಮಾಡಿರುವ ಡಾ ಮಹೇಶ್ ನಾಲವಾಡ ಬಿಜೆಪಿ ವೈಧ್ಯಕೀಯ ಪ್ರಕೋಷ್ಠ ವಿಭಾಗದ ಸಂಚಾಲಕರಾಗಿ ಕೆಲಸವನ್ನು ಮಾಡುತ್ತಿದ್ದಾರೆ.
ಕಳೆದ ಒಂದು ವರ್ಷದಿಂದಲೂ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಪಕ್ಷದ ಸಂಘಟನೆ ಸೇರಿದಂತೆ ಬೇರೆ ಬೇರೆ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಡಾ ಮಹೇಶ್ ಸಿ ನಾಲವಾಡಗೆ ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಒಂದು ಅವಕಾಶವನ್ನು ನೀಡುವಂತೆ ಕೂಗು ಜೋರಾಗುತ್ತಿದೆ.
ಕ್ಷೇತ್ರದಲ್ಲಿ ಸಾಕಷ್ಟು ತಿರುಗಾಡುತ್ತಾ ಪಕ್ಷದ ಸಂಘಟನೆಯೊಂದಿಗೆ ಸಾಮಾಜಿಕ ಸಾರ್ವಜನಿಕರ ಸಮಸ್ಯೆಗಳಿಗೆ ಈಗಲೇ ಧ್ವನಿಯಾಗಿ ಹಗಲಿರುಳು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ.ಇವರಿಗೆ ಈ ಬಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಒಂದು ಅವಕಾಶವನ್ನು ನೀಡಿ ಟಿಕೇಟ್ ನೀಡುವಂತೆ ಕ್ಷೇತ್ರದಲ್ಲಿ ಕಾರ್ಯಕರ್ತರ ಮುಖಂಡರ ಕೂಗು ಜೋರಾಗುತ್ತಿದೆ.
ಈ ಒಂದು ವಿಚಾರ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಆಂದೋಲನದ ಕೂಗು ಹೆಚ್ಚಾಗುತ್ತಿದ್ದು ಇದರೊಂದಿಗೆ ಡಾ ಮಹೇಶ್ ಸಿ ನಾಲವಾಡ ಅವರು ಕೂಡಾ ಕ್ಷೇತ್ರದಲ್ಲಿ ಆಕ್ಟೀವ್ ಆಗಿದ್ದು ಪಕ್ಷದ ಸಂಘಟನೆ ಮಾಡುತ್ತಾ ಲೋಕಸಭಾ ಚುನಾವಣೆಯ ಸಿದ್ದತೆಯಲ್ಲಿ ತೋಡಗಿದ್ದಾರೆ.ಈ ಒಂದು ಹಿನ್ನಲೆಯಲ್ಲಿ ಈ ಬಾರಿ ಇವರಿಗೆ ಟಿಕೇಟ್ ನೀಡಿ ಒಂದು ಅವಕಾಶವನ್ನು ನೀಡುವಂತೆ ಒತ್ತಾಯದ ಕೂಗು ಕೇಳಿ ಬರುತ್ತಿದೆ.
ಹಾವೇರಿಗೆ ಈ ಬಾರಿ ಸುಶಿಕ್ಷಿತ, ದೂರದೃಷ್ಟಿಯುಳ್ಳ, ಸೇವೆಯ ತುಡಿತ ಹೊಂದಿರುವ ವ್ಯಕ್ತಿ ಬೇಕು ಎನ್ನುತ್ತಿದ್ದಾರೆ ಕ್ಷೇತ್ರದ ಮತದಾರರು.