ಹುಬ್ಬಳ್ಳಿಯಲ್ಲಿ ಉಂಡೂ ಹೋದ.ಕೊಂಡು ಹೋದ ಪೋಲೀಸ ಆಫಪೀಸರ.!ಲಕ್ಷ ಲಕ್ಷ ಗೂ..ಡಿಸಿ ಕೊಟ್ಟ ಸೀನಿಯರ್ ಆ್ಯಂಡ್ ಬ್ಯಾಚ್ ಮೆಂಟ್ಸ್..
ಹುಬ್ಬಳ್ಳಿ:-ಹುಬ್ಬಳ್ಳಿಯಲ್ಲಿ ಉದ್ಯಮಿಯೊಬ್ಬರ ಪುತ್ರ “377” ಮಾಡಿ ಪೋಲೀಸರ ಕೈಗೆ ಸಿಕ್ಕಿದ್ದೇ ತಡ ಬೆಣ್ಣೆ ಬಂದು ಬಾಯಿಗೆ ಬಂದು ಬಿದ್ದಂಗಾಯ್ತು ಅಂತಾ 161 ಮಾಡಿ ಲಕ್ಷ ಲಕ್ಷ ವಸೂಲಿ ಮಾಡಿಯೇ ಬಿಟ್ಟರೂ ವಸೂಲಿ ವೀರರು.
ನಾಥ್೯ ಲಿಮಿಟ್ಸ್ ನ ಠಾಣೆಯೊಂದರ ಕ್ರೈಂ ಟೀಂನ ಸೂರ್ಯ ಚಂದ್ರನ ಜೊತೆಗೂಡಿ ಆನಂದವಾಗಿ ರಾಗಾ ಹಾಡುವ ಮೂಲಕ ಸೀನಿಯರ್ ಹಳೆ ಸಿಬ್ಬಂದಿಯೊಬ್ಬರ ಸಹಾಯದಿಂದ ಉದ್ಯಮಿ ಪುತ್ರನ ಲೂಟಿ ಮಾಡಿಯೇ ಬಿಟ್ಟಿದ್ದಾರಂತೆ.ಇವರು ಖಾಕಿಯೊಳಗಿನ ಕಳ್ಳರು ಎಂದು ಅದೇ ಠಾಣೆಯ ಗೋಡೆಗಳು ಮಾತಾಡ್ತಿವೆ.
ಈಗಾಗಲೇ ಆ ಠಾಣೆಯಿಂದ ವರ್ಗಾವಣೆಯಾಗಿ ಹೋಗಿರುವ ಪಿಆಯ್ ಹುಬ್ಬಳ್ಳಿಯಲ್ಲಿ ಉಂಡು ಹೋದ ಕೊಂಡು ಹೋದ ಎನ್ನುವಂತಾಗಿದೆ.
ಏನಿದು ಪ್ರಕರಣ ಅಂತೀರಾ ಹುಬ್ಬಳ್ಳಿಯ ಪ್ರತಿಷ್ಠಿತ ಉದ್ಯಮಿಯೊಬ್ಬರ ಮಗ 377 ಮಾಡಿ ಕೆಲ ಯುವಕರ ಕೈಗೆ ಸಿಕ್ಕಾಕಿಕೊಂಡಿದ್ದ.ಅವರ ಕೈಯಿಂದ ಮಗನನ್ನು ಕಾಪಾಡಲು ತಂದೆ ಪೋಲೀಸರ ಮೊರೆ ಹೋಗಿದ್ದ ಅದನ್ನೇ ಬಂಡವಾಳ ಮಾಡಿಕೊಂಡ ಬ್ಯಾಚ್ ಮೆಂಟ್ ಕ್ರೈಂ ಟೀಂ ಇನ್ನೊಬ್ಬ 161 ಮಾಡುವುದರಲ್ಲಿ ನಂಬರ ಒನ್ ಸೀನಿಯರ್ ಪೋಲೀಸನ ಮಾರ್ಗದರ್ಶನದಲ್ಲಿ ಅರ್ಧ ಕೋಟಿಗೆ ಡೀಲ್ ಮಾಡಿ 40 ಲಕ್ಷ ವಸೂಲಿ ಮಾಡಿದ್ದಾರಂತೆ.
ಹಿರಿಯ ಪೋಲೀಸ ಅಧಿಕಾರಿಗಳು ಪ್ರಕರಣ ಬೆನ್ನತ್ತಿ ಸರಿಯಾದ ತನಿಖೆ ಮಾಡಿದರೆ ಲಕ್ಷ ಲಕ್ಷ ಗೂ…ಡಿಸಿದವರ ಬಣ್ಣ ಬಟಾಬಯಲಾಗಲಿದೆ..